






ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಆಗಸ್ಟ್ 06 ರಂದು ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ಅಂತರ್ ಶಾಲಾ ಸ್ಪರ್ಧೆ “ಫಿಲೋಪ್ರತಿಭಾ-2026” ನಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ಪಡೆದ ಪ್ರಶಸ್ತಿಗಳು:
ಜಾನಪದ ನೃತ್ಯದಲ್ಲಿ 10ನೇ ತರಗತಿಯ ಜ್ಞಾನ ರೈ, ಸಮೀಕ್ಷಾ, ಹಸ್ತಾ ಎಚ್ ಶೆಟ್ಟಿ, ಶ್ರಾವಣಿ ವಿ ಕೆ, ದಾನ್ವಿ ಶೆಟ್ಟಿ, ಸಮೃದ್ಧಿ ಕೆ , 9ನೇ ತರಗತಿಯ ಅನ್ಯ ಶೆಟ್ಟಿ, ಯಶ್ವಿತಾ ಯು ಪ್ರಥಮ ಸ್ಥಾನ ಪಡೆದಿದ್ದಾರೆ.



ಫೇಸ್ ಪೈಟಿಂಗ್ ನಲ್ಲಿ 10ನೇ ತರಗತಿಯ ಧನ್ವಿತ್ ಕುಲಾಲ್ ಪಿ, ಅನ್ವಿತ್ ಎಚ್ ಜಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ 10ನೇ ತರಗತಿಯ ಪ್ರಾಪ್ತಿ ಪುತ್ತಿಲ, ಸಾನಿಧ್ಯ ಡಿ ಪಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಫ್ಯಾನ್ಸಿ ಡ್ರೆಸ್ ನಲ್ಲಿ 10ನೇ ತರಗತಿ ಧ್ಯಾನ್ ರೈ ಜಿ ದ್ವಿತೀಯ, ಪೆನ್ಸಿಲ್ ಸ್ಕೆಚ್ ನಲ್ಲಿ 8ನೇ ತರಗತಿಯ ಆದ್ಯಾ ಎನ್ ಎಸ್ ದ್ವಿತೀಯ, ಪಾಟ್ರಿಯೋಟಿಕ್ ಸಾಂಗ್ ನಲ್ಲಿ 10ನೇ ತರಗತಿ ಆರಾಧ್ಯ ಸಿ ಯು, ಪಿ ವಿಶಾಖಾ, ಸಾಯಿ ಸಂಚಿತ್, ಭೂಮಿಕಾ, ಪ್ರಥಮ್ ಕಾಯರ್ಗ, ಸಾಕ್ಷಿತಾ ಜೈನ್, ಹಂಸಕಾ ಡಿ ಎಸ್ ದ್ವಿತೀಯ, 10ನೇ ತರಗತಿಯ ಮೌಲ್ಯ ಎಂ ಪಿ ಅವರು ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. Launching the Productನಲ್ಲಿ 10ನೇ ತರಗತಿಯ ತರುಣ್ ಗೌಡ, ಲುಕೇಶ್ ಸಿಂಗ್ ,ಕುಶಾಲ್ ಎಂ ಬಿ, ಸಿದ್ದು, ಅಮೃತ್ ತೃತೀಯ ಸ್ಥಾನ, ಕ್ಲೆ ಮಾಡೆಲಿಂಗ್ ನಲ್ಲಿ 8ನೇ ತರಗತಿ ಅದ್ವೈತ ತೃತೀಯ ಸ್ಥಾನ ಪಡೆದಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಅಧ್ಯಕ್ಷ ಎಸ್ ಜಯರಾಮ ಕೆದಿಲಾಯ, ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ. ತರಬೇತುದಾರರಾಗಿ ಶಾಲಾ ಶಿಕ್ಷಕ ಪ್ರಶಾಂತಿ, ಉಷಾ ಹಾಗೂ ಸುಚೇತ್ ಕಾರ್ಯ ನಿರ್ವಹಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಪ್ರಸನ್ನ ಕೆ ತಿಳಿಸಿದ್ದಾರೆ.










