







ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಕಡಬ ಸಬಳೂರು ರಾಣಿ ಅಬ್ಬಕ್ಕ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ ನಡೆಯಿತು.



ಕೊಯಿಲ ಆರೋಗ್ಯ ಕಾರ್ಯಕರ್ತರಾದ ಮಂಗಳ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಕಡಬ ತಾಲೂಕಿನ ಯೋಜನಾಧಿಕಾರಿದ ಪ್ರಕಾಶ್ ಕುಮಾರ್ ಭೇಟಿ ನೀಡಿ ಪೌಷ್ಟಿಕ ಆಹಾರ ದ ಬಗ್ಗೆ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮ ದ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು. ಕೇಂದ್ರದ ಸದಸ್ಯರಿಂದ ವಿವಿಧ ಪೌಷ್ಟಿಕ ಆಹಾರದ ಪ್ರಾತ್ಯಕ್ಷತೆ ನಡೆಸಿದರು.



ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಸಂಘದ ದೇಜಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಾಥಮಿಕವಾಗಿ ಮಾತನಾಡಿದರು. ಗೋಳಿತೊಟ್ಟು ವಲಯದ ಮೇಲ್ವಿಚಾರಕರಾದ ಸುಜಾತಾ ಉಪಸ್ಥಿತರಿದ್ದರು.
ಸಂಯೋಜಕಿ ಹರಿಣಾಕ್ಷಿ ಹಾಗೂ ಸೇವಾಪ್ರತಿನಿಧಿ ಪ್ರೇಮಾವತಿ ಕಾರ್ಯಕ್ರಮ ಸಂಘಟಿಸಿದರು. ಸದಸ್ಯರೆಲ್ಲ ವಿವಿಧ ಆಟಿ ತಿಂಗಳ ಲ್ಲಿ ತಯಾರಿಸುವ ಖಾದ್ಯಗಳನ್ನು ತಯಾರಿಸಿದರು.
ಮೊಳಕೆ ಕಾಳು ಮತ್ತು ತರಕಾರಿಯ ರಂಗೋಲಿ ಆಕರ್ಷನೀಯವಾಗಿತ್ತು. ಕಾರ್ಯಕ್ರಮದ ನಿರೂಪಿಸಿ ವಿಜಯ, ಸ್ವಾಗತಿಸಿ ಬೇಬಿ ಮತ್ತು ಯಕ್ಷತ ಧನ್ಯವಾದಗೈದರು










