







ಕಡಬ: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪುಣಚದ ದೇವಿನಗರ ಶ್ರೀದೇವಿ ಪ್ರೌಢಶಾಲೆಯಲ್ಲಿ ಆಗಸ್ಟ್ 9ರಂದು ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.


14ರ ವಯೋಮಾನದ ಬಾಲಕರ ತಂಡವು ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ 17ರ ವಯೋಮಾನದ ಬಾಲಕರ ತಂಡವು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
17ರ ವಯೋಮಾನದ ಬಾಲಕರ 50 ಕೆ.ಜಿ. ವಿಭಾಗದಲ್ಲಿ 10ನೇ ತರಗತಿಯ ಪವನ್, 14ರ ವಯೋಮಾನದ ಬಾಲಕರ 30 ಕೆ.ಜಿ. ವಿಭಾಗದಲ್ಲಿ 8ನೇ ತರಗತಿಯ ಕೆ.ಎಚ್. ವಿಖ್ಯಾತ್ ಕುಮಾರ್ ಹಾಗೂ 50 ಕೆ.ಜಿ. ವಿಭಾಗದಲ್ಲಿ 8ನೇ ತರಗತಿಯ ಪೂರ್ಣೇಶ್ ಬಿ.ಕೆ. ಪ್ರಥಮ ಸ್ಥಾನ ಪಡೆದು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.



ದ್ವಿತೀಯ ಸ್ಥಾನ ಪಡೆದವರಲ್ಲಿ 17ರ ವಯೋಮಾನದ ಬಾಲಕರ 35 ಕೆ.ಜಿ. ವಿಭಾಗದ ಎನ್.ಕೆ. ಯಶ್ವಿತ್, 62 ಕೆ.ಜಿ. ವಿಭಾಗದ ಹೇಮಂತ್ ಎಂ.ಎ., ಬಾಲಕಿಯರ 44 ಕೆ.ಜಿ. ವಿಭಾಗದ ನಿರೀಕ್ಷಾ ಎಸ್., 14ರ ವಯೋಮಾನದ ಬಾಲಕರ 45 ಕೆ.ಜಿ. ವಿಭಾಗದ ನಿಶ್ಮಿತ್ ಪುರಿಯ ಹಾಗೂ 35 ಕೆ.ಜಿ. ವಿಭಾಗದ ಶೃಜನ್ ಸೇರಿದ್ದಾರೆ.
17ರ ವಯೋಮಾನದ ಬಾಲಕರ 82+ ಕೆ.ಜಿ. ವಿಭಾಗದಲ್ಲಿ 10ನೇ ತರಗತಿಯ ಶಶಾಂಕ್ ಡಿ. ಹಾಗೂ ಬಾಲಕಿಯರ 36 ಕೆ.ಜಿ. ವಿಭಾಗದಲ್ಲಿ 9ನೇ ತರಗತಿಯ ಲಿಖಿತ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕ ಯಾದವ ಬೀರಂತಡ್ಕ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ತರಬೇತಿ ನೀಡಿದ್ದು, ಶಿಕ್ಷಕಿ ಕುಮಾರಿ ವಿದ್ಯಾಶ್ರೀ ಎನ್.ಪಿ. ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದ್ದಾರೆ.










