






ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದ ನಿವಾಸಿ ದಿ. ಶಂಕರ ಭಟ್ ರವರ ಧರ್ಮಪತ್ನಿ ವೇದಾವತಿ ಅಮ್ಮ (93) ವಯೋ ಸಹಜ ಅನಾರೋಗ್ಯದಿಂದ ಆ.9ರಂದು ರಾತ್ರಿ ಮಂಗಳೂರಿನ ಅವರ ಮಗನ ಮನೆಯಲ್ಲಿ ನಿಧನರಾದರು.


ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರ ಹಾಗೂ ಶ್ರೀ ರಾಮ ಶಾಲೆಗೆ ಭೂಮಿಯನ್ನು ದಾನ ಮಾಡಿದ ಹಿರಿಮೆಯನ್ನು ಹೊಂದಿರುವ ಇವರು ಮೂವರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೋಮವಾರದಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಅವರ ಕರ್ಮ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು.













