







ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ವತಿಯಿಂದ ಆ.21 ರಂದು ಬೆಟ್ಟಂಪಾಡಿ ದೇವಾಲಯದಲ್ಲಿ ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಬೆಟ್ಟಂಪಾಡಿ ದೇವಾಲಯದಲ್ಲಿ ನಡೆಯಿತು.


ರೆಂಜ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ. ಡಿ ಹಾಗೂ ಪದಾಧಿಕಾರಿಗಳು,ನೂತನ ಒಕ್ಕೂಟದ ಅಧ್ಯಕ್ಷ ಸೋಮಶೇಖರ ಉಡ್ಡಂಗಲ ಹಾಗೂ ಪದಾಧಿಕಾರಿಗಳು,ಚೂರಿಪದವು ಒಕ್ಕೂಟದ ಪದಾಧಿಕಾರಿಗಳು, ಕಕ್ಕೂರು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಶಂಕರ ಗುಂಡ್ಯಡ್ಕ ಹಾಗೂ ಪದಾಧಿಕಾರಿಗಳು, ನೂತನ ಅಧ್ಯಕ್ಷ ಪುಷ್ಪರಾಜ್ ತಲೆಪ್ಪಾಡಿ ಹಾಗೂ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳಾದ ಜಗನ್ನಾಥ ಪಾಟಾಳಿ, ಕಲಾವತಿ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.













