ಆ.14: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸ್ಥಾಪಕರ ದಿನಾಚರಣೆ, ಶೀಂಟೂರು ಸ್ಮತಿ-2026

0

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಮಾಜಿ ಯೋಧ, ನಿವೃತ್ತ ಶಿಕ್ಷಕ ಶೀಂಟೂರು ನಾರಾಯಣ ರೈಯವರ 15ನೇ ವರ್ಷದ ಸ್ಥಾಪಕರ ದಿನಾಚರಣೆ ಆ. 14 ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶೀಂಟೂರು ನಾರಾಯಣ ರೈ ವೇದಿಕೆ, ವಿದ್ಯಾಚೇತನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ.


ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರಿ ರತ್ನ ಸವಣೂರು ಕೆ. ಸೀತಾರಾಮ ರೈಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಶೀಂಟೂರು ಸ್ಮತಿ 2026 ಕಾರ್ಯಕ್ರಮವನ್ನು ಪುತ್ತೂರಿನ ಉಪ ಪೊಲೀಸ್ ಅಧಿಕ್ಷರಾದ ಪ್ರಮೋದ್ ಕುಮಾರ್ ಬಿ. ಉದ್ಘಾಟಿಸಲಿದ್ದಾರೆ.ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಸ್. ಶಶಿಧರ್ ಸನ್ಮಾನ ನೆರೆವೇರಿಸಲಿದ್ದಾರೆ.


ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ರೇವತಿ ನಂದನ್ ರವರಿಗೆ 2026ನೇ ಸಾಲಿನ ಶೀಂಟೂರು ಪುರಸ್ಕಾರವನ್ನು ನೀಡಿ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಮೈಸೂರಿನ ಅಂತರ್ ಸಂತೆ ಉಪಪ್ರಾಂಶುಪಾಲರಾದ ಡಾ| ಸುಂದರ್ ಕೇನಾಜೆ ಶೀಂಟೂರು ಸಂಸ್ಮರಣೆ ಮಾಡಲಿದ್ದಾರೆ.
ಸವಣೂರಿನ ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್.ಸುಂದರ್ ರೈ, ನಡುಮನೆ ಅತಿಥಿಯಾಗಿ ಭಾಗವಹಿಸಲಿದ್ದಾರೆ.


ಶಿಕ್ಷಣವೇ ಸಮಾಜದ ಪ್ರಗತಿಯ ಮೂಲಾಧಾರ ಎಂಬ ಧ್ಯೇಯವನ್ನು ಜೀವನದಲ್ಲಿ ಅಳವಡಿಸಿಕೊಂಡ ಮಹನೀಯರ ಆದರ್ಶದ ಫಲವೇ ಇಂದು ನಮ್ಮೆದುರು ಹೆಮ್ಮೆಯಿಂದ ನಿಂತಿರುವ ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು.
ಈ ಸಂಸ್ಥೆಗಳ ಸಂಸ್ಥಾಪಕರಾದ ದಿವಂಗತ ಶೀಂಟೂರು ನಾರಾಯಣ್ ರೈ ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮಾದಲ್ಲಿ ಕರ್ತವ್ಯ ನಿರ್ವಹಿಸಿದ ಹೆಮ್ಮೆಯ ಯೋಧರಾಗಿದ್ದರು. ಸೇನಾ ನಿವೃತ್ತಿಯ ಬಳಿಕ ಶಿಕ್ಷಕರಾಗಿ, ಸಹಕಾರಿಯಾಗಿ ಹಾಗೂ ಆದರ್ಶ ಕೃಷಿಕರಾಗಿ ಸಮಾಜದ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದರು.
ಅವರ ಆದರ್ಶ, ಸೇವಾ ಮನೋಭಾವ ಹಾಗೂ ಶಿಕ್ಷಣದ ಮೇಲಿನ ಅಚಲ ನಂಬಿಕೆಯಿಂದ ಪ್ರೇರಿತರಾಗಿ, ಸವಣೂರು ಸೀತಾರಾಮ ರೈ ಅವರು 2001ರಲ್ಲಿ ಸವಣೂರಿನ ವಿದ್ಯಾ ಗಂಗೋತ್ರಿಯಲ್ಲಿ ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.
ಅಂದಿನಿಂದ ಇಂದಿನವರೆಗೆ ಈ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸುವ ಶಿಕ್ಷಣದ ಆಲಯವಾಗಿ ನಿರಂತರವಾಗಿ ಬೆಳೆಯುತ್ತ ಬಂದಿದೆ.

ಶೀಂಟೂರು ನಾರಾಯಣ ರೈಯವರು ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಶೀಂಟೂರು ಪ್ರತಿಷ್ಠಾನವನ್ನು ರಚಿಸಲಾಗಿದೆ. ಇದರ ಮಹಾಪೋಷಕರಾಗಿ ಉದ್ಯಮಿ ಎ.ಜೆ.ಶೆಟ್ಟಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಎ.ಜೆ.ಶೆಟ್ಟಿ, ಪೋಷಕರಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ದಿ. ವಿನಯ ಹೆಗ್ಡೆ ಸಹಿತ ಅನೇಕ ಮಂದಿ ಸಹಕರಿಸಿದ್ದಾರೆ. 2026-27 ನೇ ಸಾಲಿನಲ್ಲಿ ಶೀಂಟೂರು ಶಿಷ್ಯ ವೇತನಕ್ಕೆ 10 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಕೆ.ಸೀತಾರಾಮ ರೈ ಸವಣೂರು
ಸಂಚಾಲಕರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು

LEAVE A REPLY

Please enter your comment!
Please enter your name here