






ಉಪ್ಪಿನಂಗಡಿ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ.11ರಂದು ಉಪ್ಪಿನಂಗಡಿ ಹೋಬಳಿಗೆ ಸಂಬಂಧಪಟ್ಟ ವಿವಿಧ ಅಧಿಕಾರಿಗಳೊಂದಿಗೆ ಏಕಮುಖ ವೀಡಿಯೋ ಸಂವಾದ ನಡೆಸಿದರು.


ಈ ಸಂದರ್ಭ ಉಪ್ಪಿನಂಗಡಿ ಹೋಬಳಿ ಉಪತಹಶೀಲ್ದಾರ್ ಕವಿತಾ, ಕಂದಾಯ ನಿರೀಕ್ಷಕ ಗೋಪಾಲ ಕೆ.ಟಿ., ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸೇರಿದಂತೆ ಪೊಲೀಸ್, ಆರೋಗ್ಯ, ಪಶುಸಂಗೋಪನೆ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.













