ಕಡಬ ತಾ. 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚನೆ

0

ಅಧ್ಯಕ್ಷ; ಕೇಶವ ಅಮೈ, ಗೌರವಾಧ್ಯಕ್ಷ: ರಾಧಾಕೃಷ್ಣ ಕೆ.ಎಸ್., ಕಾರ್ಯಾಧ್ಯಕ್ಷ; ನಾರಾಯಣ ಭಟ್ ಟಿ., ಸಂಚಾಲಕ; ಬಾಲಕೃಷ್ಣ ಯಡಪಡಿತ್ತಾಯ, ಪ್ರ.ಕಾರ್ಯದರ್ಶಿ; ಗಾಯತ್ರಿ ಯು.ಎನ್.

ರಾಮಕುಂಜ: ಆ.29ರಂದು ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ನಡೆಯುವ ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಕೇಶವ ಅಮೈ ಕಲಾಯಿಗುತ್ತು, ಗೌರವಾಧ್ಯಕ್ಷರಾಗಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಕಾರ್ಯಾಧ್ಯಕ್ಷರಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ., ಸಂಚಾಲಕರಾಗಿ ಬಾಲಕೃಷ್ಣ ಯಡಪಡಿತ್ತಾಯ ಕಿಜಾನ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್. ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಅಬ್ರಹಾಂ ವರ್ಗೀಸ್ ನೆಲ್ಯಾಡಿ, ಕಡಬ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಆರ್.ಕೆ., ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್ ದಾಮ್ಲೆ, ಕಾರ್ಯದರ್ಶಿಯಾಗಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಗೌಡ ಸಾನಿಧ್ಯ ವಳೆಂಜ, ಜೊತೆ ಕಾರ್ಯದರ್ಶಿಗಳಾಗಿ ಚೆನ್ನಕೇಶವ ರೈ ಗುತ್ತುಪಾಲು, ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ, ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಸುಶೀಲ ಹಾಗೂ ಕೋಶಾಧಿಕಾರಿಯಾಗಿ ಕರುಣಾಕರ ದೊಡ್ಡ ಉರ್ಕ ಆಯ್ಕೆಗೊಂಡಿದ್ದಾರೆ. ಇದೇ ವೇಳೆ ವಿವಿಧ ಉಪಸಮಿತಿಗಳಿಗೆ ಸಂಚಾಲಕರ ನೇಮಕ ಮಾಡಲಾಯಿತು. ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೆ.ಸೇಸಪ್ಪ ರೈ, ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕೋಶಾಧ್ಯಕ್ಷ ಕೆ.ಬಾಲಚಂದ್ರ ಮುಚ್ಚಿಂತಾಯ, ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ.ಹಾಗೂ ಸದಸ್ಯರು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here