







ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ(ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಇವರ ವತಿಯಿಂದ ಅಂತರ್ಜಲ ಸಂರಕ್ಷಣೆ ಮತ್ತು ಸದ್ಬಳಕೆ ವಿಷಯದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕಲಾಚಿತ್ರ ಸ್ಪರ್ಧೆಯು ಮಂಗಳೂರಿನ ಸೈಂಟ್ ಅಲೋಶಿಯಸ್ ಪ್ರೌಢಶಾಲೆಯಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಲಿಖಿತಾ ಕೆ (ವಸಂತ ಗೌಡ ಮತ್ತು ಪ್ರತಿಮಾ ಕೆ ದಂಪತಿಗಳ ಪುತ್ರಿ) – ಪ್ರಥಮ ಸ್ಥಾನ ಪಡೆದು ನಗದು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇವಳಿಗೆ ಶಾಲಾ ಚಿತ್ರಕಲಾ ಶಿಕ್ಷಕ ರುಕ್ಮಯ ಪೂಜಾರಿ ತರಬೇತಿ ನೀಡಿರುತ್ತಾರೆ.












