ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ಕಾವು ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಬಡಗನ್ನೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಕಾವು ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು  ಆ.11ರಂದು  ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜನಜಾಗೃತಿ ಗ್ರಾಮಸಮಿತಿ ವಲಯಾಧ್ಯಕ್ಷ ವಿಕ್ರಮ್ ರೈ ಸಾಂತ್ಯ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು . ಮುಖ್ಯ ಸಂಪನ್ಮೂಲ ವ್ಯಕ್ತಿ ಮಹಾಬಲ ರೈ ಕರ್ನೂರು ಸ್ವಾಸ್ಥ್ಯ ಸಂಕಲ್ಪದ ಬಗ್ಗೆ  ಪ್ರಶ್ನೋತರದ ಮೂಲಕ ವಿವರಿಸಿ, ಉತ್ತರಿಸಿದವರಿಗೆ ಅವರೇ ಸ್ವ ಇಚ್ಚೆಯಿಂದ ಲೇಖನಿಗಳನ್ನು ಬಹುಮಾನವಾಗಿ ನೀಡಿದರು.

ವೇದಿಕೆಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಶಿವರಾಮ ಹೆಚ್ ಡಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಕಾರ್ಯಕ್ರಮ ಮಾಡುತ್ತ ಬರುತ್ತಿದ್ದು ಸ್ವಾಸ್ಥ್ಯ ಸಂಕಲ್ಪದ ಮೂಲಕ  ಮಕ್ಕಳು ಪ್ರೌಢಾವಸ್ಥೆಯಲ್ಲಿ ದಾರಿ ತಪ್ಪದಂತೆ ಉತ್ತಮ ಮಾಹಿತಿ ಆಯೋಜನೆ ಮಾಡಿರುವುದು ತುಂಬ ಖುಷಿ ತಂದಿದೆ ಎಂದರು.

ಈಶ್ವರಮಂಗಲ ಪೊಲೀಸ್ ಹೊರ ಠಾಣೆಯ ಪೂಲೀಸ್ ಅಧಿಕಾರಿ ನಾಗರಾಜ್ ಮಾತನಾಡಿ, ಸ್ವಾಸ್ಥ್ಯ ಕೆಡುವುದರ ಮೂಲಕ ಯಾವ ಯಾವ ರೀತಿಯಲ್ಲಿ ಜನರು ದಾರಿ ತಪ್ಪುತ್ತಿದ್ದಾರೆ ಇದಕ್ಕೆ ಇತ್ತೀಚೆಗೆ ಗಾಳಿಮುಖದಲ್ಲಿ ಮಾದಕ ವಸ್ತು ಸೇವನೆ ಮಾಡಿದ ವ್ಯಕ್ತಿಯನ್ನು ಹಿಡಿದು ಅದರ ಈ ಜಾಲವನ್ನು ಹುಡುಕಿದಾಗ ಕೇರಳದ ಕೊಚ್ಚಿಯಲ್ಲಿ ಪತ್ತೆಯಾಗಿದ್ದು , ಆ ವ್ಯಕ್ತಿಯನ್ನು ಕೂಡಲೇ ಹಿಡಿದು ಜೈಲಿಗೆ ಹಾಕಲಾಗಿದೆ . ಅದಕ್ಕಾಗಿ ಶಾಲೆಯಲ್ಲಿ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ  ಜನಜಾಗೃತಿ ಮುಖಾಂತರ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಉತ್ತಮ ಕಾರ್ಯಕ್ರಮ ಆಗಿದೆ ಎಂದು ತಿಳಿಸಿದರು

ಜನಜಾಗೃತಿ ವಲಯಾಧ್ಯಕ್ಷ ವಿಕ್ರಮ್ ರೈ ಯವರು ಪ್ರಸ್ತಾವಿಕದೊಂದಿಗೆ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಶಾಲಾ ಮುಖ್ಯ ಗುರು ಸುಕೇಶ್ ರೖೆ ಸ್ವಾಗತಿಸಿದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಸೇವಪ್ರತಿನಿಧಿ ಸುಂದರ ಜಿ ವಂದಿಸಿದರು .ವಲಯ ಮೇಲ್ವಿಚಾರಕಿ  ಪ್ರಣೀತಾ  ,ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here