ಕರಾಟೆ:ಸುಳ್ಯಪದವು ನವೋದಯ ಪ್ರೌಢಶಾಲಾ ವಿದ್ಯಾರ್ಥಿ ಅನಾಸ್ ಎನ್ ಎ ತಾಲೂಕು ಮಟ್ಟಕ್ಕೆ

0

ಬಡಗನ್ನೂರು : ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ  ಸುಳ್ಯಪದವು ನವೋದಯ  ಪ್ರೌಢಶಾಲಾ   8 ನೇ ತರಗತಿ ವಿದ್ಯಾರ್ಥಿ ಅನಾಸ್  ಎನ್ ಎ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಆಯ್ಕೆಯಾಗಿದ್ದಾನೆ. ಇವನು ಸಿಧ್ಧಿಕ್ ಎನ್ ಎ ಮತ್ತು ಮಮ್ತೂಝ್ ದಂಪತಿಗಳ ಪುತ್ರ. ಈತನಿಗೆ ಶೇಖರ್ ಮಾಡಾವು ತರಬೇತಿ ನೀಡಿರುತ್ತಾರೆ.ಎಂದು  ಶಾಲಾ  ಮುಖ್ಯ ಶಿಕ್ಷಕ ಸುಕೇಶ್ ರೖೆ ಕುತ್ಯಾಳ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here