ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕಾವು ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಬಡಗನ್ನೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಕಾವು ವಲಯದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಆ. 11 ರಂದು ಈಶ್ವರಮಂಗಲ ಶ್ರೀ  ಪಂಚಲಿಂಗೇಶ್ವರ  ಪ್ರೌಢ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ  ಮಹಾಬಲ ರೈ ಕರ್ನೂರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸ್ವಾಸ್ಥ್ಯ ಸಂಕಲ್ಪ ಬಗ್ಗೆ ವಿದ್ಯಾರ್ಥಿಗಳಿಗೆ  ಸವಿಸ್ತಾರವಾಗಿ ಮಾಹಿತಿ ನೀಡಿದರು.ಸ್ವಾಸ್ಥ್ಯ ಸಂಕಲ್ಪದ ಬಗ್ಗೆ ವಿದ್ಯಾರ್ಥಿಗಳಿಗೆ   ಪ್ರಶ್ನೆ ಕೇಳಿ ಉತ್ತರಿಸಿದವರಿಗೆ  ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಬಳಿಕ ವಿದ್ಯಾರ್ಥಿಗಳು  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈಶ್ವರಮಂಗಲ  ಹೊರ ಠಾಣೆಯ ಪೂಲೀಸ್ ಅಧಿಕಾರಿ ನಾಗರಾಜ್ ಮಾತನಾಡಿ ಸ್ವಾಸ್ಥ್ಯ ಕೆಡುವುದರ ಮೂಲಕ ಯಾವ ಯಾವ ರೀತಿಯಲ್ಲಿ ಜನರು ದಾರಿ ತಪ್ಪುತ್ತಿದ್ದಾರೆ ಇದಕ್ಕೆ ಇತ್ತೀಚೆಗೆ ಗಾಳಿಮುಖದಲ್ಲಿ  ನಡೆದ ಘಟನೆ ಸಾಕ್ಷಿಯಾಗಿದೆ  ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯದನ್ನು ತಡೆಗಟ್ಟಲು ಶಾಲೆಗಳಲ್ಲಿ ಶ್ರೀ   ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ  ಜನಜಾಗೃತಿ ಮುಖಾಂತರ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಉತ್ತಮ ಕಾರ್ಯಕ್ರಮ ಇದಾಗಿದೆ  ಇದರ ಸದುಪಯೋಗ ಪಡೆದು ಉತ್ತಮ ಪ್ರಜೆಗಳಾಗಿ ಮುಂದೆ ಜೀವನ ನಡೆಸುವಂತೆ  ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ವಲಯ ಜನಜಾಗೃತಿ ಕ್ರಾಫ್ಟ್ ಸದಸ್ಯರಾದ ದಿನೇಶ್ ರೈ ಕುತ್ಯಾಳ ಶಾಲಾ ಮುಖ್ಯ ಶಿಕ್ಷಕಿ ವನಿತಾ ಅರಿಯಡ್ಕ ವಲಯ ಮೇಲ್ವಿಚಾರಕಿ ಪ್ರಣೀತಾ  ಉಪಸ್ಥಿತರಿದ್ದರು.ಸಹ ಶಿಕ್ಷಕಿ  ಸುಪ್ರಭಾ ರವರ ಪ್ರಾರ್ಥಿಸಿದರು.ಶಾಲಾ ಮುಖ್ಯ ಶಿಕ್ಷಕಿ ವನಿತಾ  ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸೇವಾ ಪ್ರತಿನಿಧಿ ಸುಂದರ ಜಿ  ವಂದಿಸಿದರು .ವಲಯ ಮೇಲ್ವಿಚಾರಕಿ ಪ್ರಣೀತಾ ,ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here