







ಹೊಸದಿಲ್ಲಿ: ಇಂಡೇನ್, HP ಮತ್ತು ಭಾರತ್ ಗ್ಯಾಸ್ ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ಆಗಸ್ಟ್ 16ರೊಳಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಇ-ಕೆವೈಸಿ ಪೂರ್ಣಗೊಳಿಸುವಂತೆ ಮೊಬೈಲ್ ಸಂದೇಶದ ಮೂಲಕ ಸೂಚಿಸಿವೆ.


ಪ್ರಧಾನ್ ಮಂತ್ರಿ ಉಜ್ವಲ ಯೋಜನೆ PMUY ಅಡಿಯಲ್ಲಿ ಎಲ್ಪಿಜಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರಿಗೆ ಇದು ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಂಪರ್ಕ ರದ್ದಾಗುವುದಿಲ್ಲ. ಆದರೆ ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗುತ್ತದೆ.



ಯಾಕೆ ಕಡ್ಡಾಯ?
ಉಜ್ವಲ ಯೋಜನೆ ಗ್ರಾಹಕರಿಗೆ 14.2 ಕೆಜಿ ಸಿಲಿಂಡರ್ಗೆ 300 ರೂ. ಸಬ್ಸಿಡಿ ಸಿಗುತ್ತದೆ. ಈ ವರ್ಷ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಸರ್ಕಾರ ಇಳಿಸಿದೆ. ಈ ಸೌಲಭ್ಯ ಮುಂದುವರಿಯಬೇಕಾದರೆ e-KYC ಕಡ್ಡಾಯ. ಮಾರ್ಚ್ 2026ರಿಂದಲೇ ಇದನ್ನು ಕಡ್ಡಾಯಗೊಳಿಸಲಾಗಿತ್ತು. ಈಗಾಗಲೇ ಮಾಡಿಸಿರುವವರು ಮತ್ತೆ ಮಾಡಿಸುವ ಅಗತ್ಯವಿಲ್ಲ.
ಗಡುವು ತಪ್ಪಿದರೆ ಏನಾಗುತ್ತದೆ?
ಉದಾ: ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 945 ರೂ. ಇದೆ. ಉಜ್ವಲ ಫಲಾನುಭವಿಗೆ ಸಬ್ಸಿಡಿ ನಂತರ 645 ರೂ.ಗೆ ಸಿಗುತ್ತದೆ. ಆ.16ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪೂರ್ತಿ 945 ರೂ. ಮಾರುಕಟ್ಟೆ ದರ ಕೊಟ್ಟು ತೆಗೆದುಕೊಳ್ಳಬೇಕಾಗುತ್ತದೆ.ಆಲ್ ಇಂಡಿಯಾ ಎಲ್ಪಿಜಿ ಡಿಸ್ಟ್ರಿಬ್ಯೂಟರ್ಸ್ ಫೆಡರೇಶನ್ ಉಪಾಧ್ಯಕ್ಷರ ಪ್ರಕಾರ, “ಇ-ಕೆವೈಸಿ ಇಲ್ಲದವರಿಗೆ ಕಮರ್ಷಿಯಲ್ ದರ ವಿಧಿಸುತ್ತಾರಾ ಎಂಬುದು ಸ್ಪಷ್ಟವಿಲ್ಲ. ಆದರೆ ಗೃಹಬಳಕೆ ದರದಲ್ಲಿ ಸಬ್ಸಿಡಿ ಸಿಗುವುದಿಲ್ಲ” ಎಂದು ಹೇಳಿದ್ದಾರೆ.ಗಮನಿಸಿ: ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ಅಥವಾ ಇಂಡೇನ್/HP/ಭಾರತ್ ಗ್ಯಾಸ್ ಅಪ್ಲಿಕೇಶನ್ ಮೂಲಕ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಬಹುದು.










