ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯ – ಸೆ.30ರೊಳಗೆ ಪೂರ್ಣಗೊಳಿಸಲು ಸೂಚನೆ

0

ಪುತ್ತೂರು:ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸೀಡಿಂಗ್ ಮತ್ತು ಇ-ಕೆವೈಸಿ ಕಡ್ಡಾಯಗೊಳಿಸಿದ್ದು ಸೆ.30ರ ಒಳಗೆ ಪೂರ್ಣಗೊಳಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚಿಸಿದೆ.


ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಒಟ್ಟು 2,16,436 ಪಡಿತರ ಚೀಟಿಯಲ್ಲಿನ 6,62,195 ಫಲಾನುಭವಿಗಳ ಇ-ಕೆವೈಸಿ ಬಾಕಿ ಇದೆ. ಪುತ್ತೂರು ತಾಲೂಕಿನಲ್ಲಿ 22116 ಪಡಿತರ ಚೀಟಿಯಲ್ಲಿನ 69304 ಫಲಾನುಭವಿಗಳು ಹಾಗೂ ಕಡಬ ತಾಲೂಕಿನಲ್ಲಿ 15074 ಪಡಿತರ ಚೀಟಿಯಲ್ಲಿನ 43040 ಫಲಾನುಭವಿಗಳ ಇ-ಕೆವೈಸಿ ಬಾಕಿ ಇದೆ.


ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದ್ದು ಫಲಾನುಭವಿಗಳ ಪಟ್ಟಿಯನ್ನು ನೀಡಲಾಗಿದೆ.ಫಲಾನುಭವಿಗಳು ತಮಗೆ ಜೋಡಣೆಯಾದ ನ್ಯಾಯಬೆಲೆ ಅಂಗಡಿಗೆ ಖುದ್ದು ಭೇಟಿ ನೀಡಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವಂತೆ ತಿಳಿಸಲಾಗಿದೆ.ಇ-ಕೆವೈಸಿ ಪ್ರಕ್ರಿಯೆ ಉಚಿತವಾಗಿದ್ದು ಯಾವುದೇ ಶುಲ್ಕ ಪಾವತಿಸುವಂತಿಲ್ಲ.ಇ-ಕೆವೈಸಿ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ಪಡೆಯಲು ಸಮಸ್ಯೆ ಉಂಟಾಗಲಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.


ಜಿಲ್ಲೆಯ ಇತರ ತಾಲೂಕುಗಳ ವಿವರ
ಬಂಟ್ವಾಳ:ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 45480,-ಫಲಾನುಭವಿಗಳ ಸಂಖ್ಯೆ 141923, ಬೆಳ್ತಂಗಡಿ:ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 37532, ಫಲಾನುಭವಿಗಳ ಸಂಖ್ಯೆ 111798,ಮಂಗಳೂರು: ಪಡಿತರ ಚೀಟಿಗಳು 38364, ಫಲಾನುಭವಿಗಳ ಸಂಖ್ಯೆ 116437, ಮೂಡುಬಿದಿರೆ: ಪಡಿತರ ಚೀಟಿಗಳು 11365, -ಫಲಾನುಭವಿಗಳ ಸಂಖ್ಯೆ 33252, ಮೂಲ್ಕಿ: ಪಡಿತರ ಚೀಟಿಗಳು 8055, ಫಲಾನುಭವಿಗಳ ಸಂಖ್ಯೆ 23617,ಸುಳ್ಯ: ಪಡಿತರ ಚೀಟಿಗಳು 14247, ಫಲಾನುಭವಿಗಳ ಸಂಖ್ಯೆ 41630, ಉಳ್ಳಾಲ: ಪಡಿತರ ಚೀಟಿಗಳು 24203, ಫಲಾನುಭವಿಗಳ ಸಂಖ್ಯೆ 81194.

LEAVE A REPLY

Please enter your comment!
Please enter your name here