ಪುತ್ತೂರು ನಗರ ಸಭಾ ಕಚೇರಿಗೆ ಲೋಕಾಯುಕ್ತ ಪೊಲೀಸರ ದಿಡೀರ್ ಭೇಟಿ

0

ಪುತ್ತೂರು:ಪುತ್ತೂರು ನಗರಸಭೆಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಆ.14ರಂದು ದಿಢೀರ್ ಆಗಮಿಸಿ ರಾತ್ರಿಯ ತನಕ ವಿವಿಧ ಕಡತ ಹಾಗೂ ಹಲವಾರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.


ಲೋಕಾಯುಕ್ತ ಎಸ್ಪಿ ದಿನೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ|ಗಾನ ಪಿ ಕುಮಾರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಸಹಿತ ಸುಮಾರು 10 ಮಂದಿ ಸಿಬ್ಬಂದಿಗಳು ಆ.14ರಂದು ಬೆಳಗ್ಗೆ ನಗರಸಭೆಗೆ ದಿಢೀರ್ ಭೇಟಿ ನೀಡಿ, ಆರಂಭದಲ್ಲಿ ಕಚೇರಿ ದ್ವಾರದಲ್ಲಿದ್ದ ಕೆಲವರನ್ನು ವಿಚಾರಿಸಿದರು.ಅಲ್ಲಿದ್ದ ಪ್ರತಿಯೊಬ್ಬ ಸಾರ್ವಜನಿಕರಲ್ಲೂ,ಯಾಕೆ ಬಂದಿರಿ.ಏನು ಬಿಲ್ ಕಟ್ಟಲು.ಎಷ್ಟು ಎಂದೆಲ್ಲ ವಿಚಾರಿಸಿದರು.ಬಳಿಕ ನಗರಸಭೆ ಕಚೇರಿ ಸಿಬ್ಬಂದಿಗಳ ಅಧಿಕಾರಿಗಳ ಮೊಬೈಲ್ ಪಡೆದುಕೊಂಡು, ಯುಪಿಐ ಮೂಲಕ ನಡೆದಿರುವ ಹಣದ ವಹಿವಾಟಿನ ಪರಿಶೀಲನೆ ಮಾಡಿದರು. ಕಚೇರಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ಪಡೆದು ಒಂದು ಟ್ರೇಯಲ್ಲಿ ಇಟ್ಟು ಮೇಲಿನ ಅಂತಸ್ತಿನ ಕಚೇರಿಗೆ ಕೊಂಡೊಯ್ದರು.ಅಲ್ಲಿ ಪೌರಾಯುಕ್ತರು,ಇಂಜಿನಿಯರ್, ಸಿಬ್ಬಂದಿಗಳ ವಿಭಾಗಗಳಿಗೆ ಹೋಗಿ ಕಡತಗಳ ಪರಿಶೀಲನೆ ಮಾಡಿದರು.ಬೆಳಗ್ಗೆ ಸುಮಾರು 11 ಗಂಟೆಗೆ ಆರಂಭಗೊಂಡ ತಪಾಸಣೆ ಕಾರ್ಯ ರಾತ್ರಿ ತನಕವೂ ಮುಂದುವರಿಯಿತು.ಲೋಕಾಯುಕ್ತ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್, ಇನ್‌ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಕಾನ್‌ಸ್ಟೇಬಲ್, ಹೆಡ್‌ಕಾನ್‌ಸ್ಟೇಬಲ್ ಸಹಿತ 10 ಮಂದಿ ತಂಡದಲ್ಲಿದ್ದರು.

LEAVE A REPLY

Please enter your comment!
Please enter your name here