ಲಯನ್ಸ್ ಮಹಿಳಾ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ‘ಆಟಿದ ಪೊರ್ಲು’ ಕಾರ್ಯಕ್ರಮ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ತಾಲೂಕು ಮಹಿಳಾ ಒಕ್ಕೂಟ ನವ್ಯಶ್ರೀ ಮಹಿಳಾ ಮಂಡಲ ತುಳು ಅಪ್ಪೆ ಕೂಟ ಶಿವಳ್ಳಿ ಸಂಪದ ಮಹಿಳಾ ವಿಭಾಗ ಪುತ್ತೂರು ಇವರ ಸಂಯುಕ್ತಾ ಆಶ್ರಯದಲ್ಲಿ ಆಟಿದ ಪೊರ್ಲು ಕಾರ್ಯಕ್ರಮ ಲಯನ್ ಸೇವಾ ಮಂದಿರದಲ್ಲಿ ನಡೆಯಿತು.

ಸಭೆಯು ಭಾರತಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಮೋಹಿನಿ ದಿವಾಕರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಆರತಿ ಮೇಲ್ವಿಚಾರಕಿ ಸಿಡಿಪಿ ಒ ಆಫೀಸ್ ಚೆನ್ನಮಣಿ ಆಡಿ ಉದ್ಘಾಟಿಸಿದರು ಮತ್ತು ಶುಭ ಹಾರೈಸಿದರು ಮುಖ್ಯ ಅತಿಥಿ ಉಷಾ ನಾಯಕ್ ಅಧ್ಯಕ್ಷರು ತಾಲೂಕು ಮತ್ತು ಜಿಲ್ಲಾ ಮಹಿಳಾ ಒಕ್ಕೂಟ ಇವರು ಮಹಿಳಾ ಒಕ್ಕೂಟದ ಬಗ್ಗೆ ಮಾತಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾಶ್ರೀ ವಾಸವಿಯವರು ಆಗಮಿಸಿ ಆಟಿ ಆಚರಣೆ ಮತ್ತು ಆಟಿ ತಿಂಗಳಲ್ಲಿ ತಿನ್ನುವ ಆಹಾರ ಮತ್ತು ಅದರಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಉಪನ್ಯಾಸ ನೀಡಿದರು.

ಅಧ್ಯಕ್ಷ ಸ್ಥಾನವನ್ನು ಲಯನ್ ಅಧ್ಯಕ್ಷರಾದ ಲಯನ್ ಮಂಜುನಾಥ್ ವಹಿಸಿ ಸಂದರ್ಭೋಚಿತವಾಗಿ ಮಾತಾಡಿದರು. ಮಹಿಳೆಯರಿಗೆ ಚೆನ್ನೆಮಣೆ ಮತ್ತು ಹಲವು ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರ ಬಹುಮಾನ ವಿತರಣೆ ಕಾರ್ಯಕ್ರಮವನ್ನು ವತ್ಸಲರಾಜ್ಞಿ ಗೌರವಾಧ್ಯಕ್ಷರು ಶಿವಳ್ಳಿ ಸಂಪದ ಮಹಿಳಾ ವಿಭಾಗ ಇವರು ನಡೆಸಿಕೊಟ್ಟರು. ಲಯನ್ ಪ್ರೇಮಲತಾ ರಾವ್ ಅಧ್ಯಕ್ಷರು ನವ್ಯಶ್ರೀ ಮಹಿಳಾ ಮಂಡಲ ಇವರು ಧನ್ಯವಾದಗೈದರು. ಹರಿನಾಕ್ಷಿ ಜೆ. ಶೆಟ್ಟಿ ಅಧ್ಯಕ್ಷರು. ತುಳು ಅಪ್ಪೆಕೂಟ ಇವರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here