







ಅಂಬೇಡ್ಕರ್ ಚಿಂತನೆಗಳನ್ನು ವರ್ತಮಾನ ಕಾಲಕ್ಕೆ ಅನ್ವಯಿಸಿ : ವಿದ್ಯಾರ್ಥಿಗಳಿಗೆ ಪ್ರೊಫೆಸರ್ ನಂದಕಿಶೋರ್


ಪುತ್ತೂರು : ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಗಾಧವಾದ ಜ್ಞಾನಭಂಡಾರವನ್ನು ಹೊಂದಿದ್ದರು. ಪುಸ್ತಕಗಳ ಓದು, ಮನನ ಮೂಲಕ ಅವರು ಜಗತ್ತಿನ ಜ್ಞಾನವನ್ನು ಅವಾಹಿಸಿಕೊಂಡಿದ್ದರು. ಇದರಿಂದ ಶಿಕ್ಷಣ ಎಂಬ ಅಸ್ತ್ರದ ಮೂಲಕ ಅವರಿಗೆ ಶೂನ್ಯದಿಂದ ಅದ್ಭುತವನ್ನು ಕಾಣಲು ಸಾಧ್ಯವಾಯಿತು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊಫೆಸರ್ ನಂದಕೊಶೋರ್ ಎಸ್ ಅಭಿಪ್ರಾಯ ಪಟ್ಟರು.



ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡದ ವತಿಯಿಂದ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು, ಮತ್ತು ಸಮೃದ್ದಿ ಇಕೋ ಕ್ಲಬ್ ಸಹಯೋಗದಲ್ಲಿ ಆ.12 ನಡೆದ
ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜೀವಾನಾಧಾರಿತ ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ದ್ವಿತೀಯ ಕಲಾ ವಿಭಾಗದ ಧನರಾಜ್ ಬಿ.ಕೆ ಪ್ರಥಮ, ದ್ವಿತೀಯ ವಾಣಿಜ್ಯ ವಿಭಾಗದ ನಿಖಿಲ್ ಕುಮಾರ್ ದ್ವಿತೀಯ ಮತ್ತು ದ್ವಿತೀಯ ಕಲಾ ವಿಭಾಗದ ವಚನ್ ಡಿ.ಕೆ ತೃತೀಯ ಬಹುಮಾನಗಳನ್ನು ಪಡೆದರು.










