ಪುತ್ತೂರು ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಸ್ವೀಕಾರ

0

ವಕೀಲರು ಸ್ಮಾರ್ಟ್ ಆಗಿ ಕೆಲಸ ಮಾಡಬೇಕು- ಡಾ| ಅರುಣ್ ಶ್ಯಾಮ್
ನ್ಯಾಯದ ಪರ ಹೋರಾಟ ಮಾಡುವ ಸಂಘವಾಗಬೇಕು- ಬಿ. ಮೋಹನ್ ಕುಮಾರ್

ಪುತ್ತೂರು: ಪುತ್ತೂರು ವಕೀಲರ ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ, ವಕೀಲ ದಂಪತಿಗಳಿಗೆ ಅಭಿನಂದನೆ, ಆಟಿಡೊಂಜಿ ತುಳುವೆರೆ ಕೂಟ, ಬಹುಭಾಷಾ ಕವಿಗೋಷ್ಠಿ, ಜನಪದ ವಿಚಾರಗೋಷ್ಠಿ ಕಾರ್ಯಕ್ರಮ ಆ.14ರಂದು ಬನ್ನೂರಿನ ಆನೆಮಜಲು ವಕೀಲರ ಭವನದಲ್ಲಿ ನಡೆಯಿತು.


ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮತ್ತು ಹೈಕೋಟ್ ಹಿರಿಯ ವಕೀಲ ಹಾಗೂ ಕರ್ನಾಟಕ ಬ್ಯಾಂಕ್ ನಿರ್ದೇಶಕರೂ ಆಗಿರುವ ಡಾ| ಅರುಣ್ ಶ್ಯಾಮ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪುತ್ತೂರು ಕೋರ್ಟ್‌ನಲ್ಲಿ ನಾನು ಅಂಬೆಗಾಲು ಇಟ್ಟು ಬೆಳೆದಿದ್ದೇನೆ. ಇದು ನನ್ನ ತವರು ಮನೆ. ಇಲ್ಲಿಂದ ವಕೀಲ ವೃತ್ತಿ ಆರಂಭಿಸಿದ್ದೇನೆ. ಬಳಿಕ ಬೆಂಗಳೂರುನಲ್ಲಿ ವಕೀಲ ವೃತ್ತಿ ಮುಂದುವರೆಸಿದ್ದೇನೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ನನಗೆ ಸೀನಿಯರ್ ಅಡ್ವೋಕೇಟ್ ಪದವಿ ಕೂಡ ಸಿಕ್ಕಿದೆ. ಇದು ಮಹಾಲಿಂಗೇಶ್ವರನ ಆಶೀರ್ವಾದವಾಗಿದೆ. ನನ್ನ ವೃತ್ತಿ ನನಗೆ ಬದುಕು ಕೊಟ್ಟಿದೆ. ಬೆಂಗಳೂರಿನಲ್ಲಿ ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿದ್ದೇನೆ. ಇದರಲ್ಲಿ ನಿಮ್ಮ ಸಹಕಾರವೂ ಇದೆ. ಪುತ್ತೂರಿನ ಬಾರ್ ಅಶೋಸಿಯೇಶನ್‌ನಲ್ಲಿ ಅಭಿವೃದ್ಧಿ ಕೆಲಸಗಳು ಆಗಿದೆ. ನಿಮ್ಮೆಲ್ಲರ ಪ್ರತಿನಿಧಿಯಾಗಿ ನನಗೆ ಅಳಿಲು ಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ ಎಂದರು. ನಾನು ಮತ್ತು ಸಂತೋಷ್ ಕುಮಾರ್ ಅವರು ಕ್ಲಾಸ್‌ಮೇಟ್ ಆಗಿದ್ದೆವು. ನಾವು ಎಲ್‌ಎಲ್‌ಬಿ ಕಲಿಯುತ್ತಿರುವಾಗ ಕಂಬೈನ್ಡ್ ಸ್ಟಡಿ ಮಾಡುತ್ತಿದೆವು. ಅವರೊಂದಿಗೆ ವಿಶೇಷವಾದ ಸ್ನೇಹ, ಒಡನಾಟ ಇತ್ತು. ಬಾರ್ ಮತ್ತು ಬೆಂಚ್ ಎರಡು ಚಕ್ರ ಇದ್ದ ಹಾಗೆ. ವಕೀಲರು ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ ಆಗಿ ಕೆಲಸ ಮಾಡಬೇಕು. ನಿರಂತರ ಪ್ರಯತ್ನ ಬೇಕು. ಮಾಡುವ ಕೆಲಸದಲ್ಲಿ ತೃಪ್ತಿ ಇರಬೇಕು ಎಂದು ಯುವ ವಕೀಲರಿಗೆ ಸಲಹೆ ನೀಡಿದ ಅವರು ಯುವ ವಕೀಲರಿಗೆ ನ್ಯಾಯದಲ್ಲಿ ಮುಕ್ತ ಮನಸಿನಿಂದ ಸಹಕಾರ ನೀಡಿ ಎಂದು ನ್ಯಾಯಾಧೀಶರುಗಳಿಗೆ ವಿನಂತಿಸಿದರು.

ಮಂಗಳೂರು ಸರಕಾರಿ ಅಭಿಯೋಜಕರಾದ ಬಿ. ಮೋಹನ್ ಕುಮಾರ್ ಮಾತನಾಡಿ ವಕೀಲರ ಸಂಘ ಕೇವಲ ಸಂಘಟನೆ ಆಗದೆ ನ್ಯಾಯದ ಪರ ಹೋರಾಟ ಮಾಡುವ ಸಂಘವಾಗಬೇಕು. ನ್ಯಾಯ ಕಾಪಾಡುವುದು ವಕೀಲರ ಜವಾಬ್ದಾರಿಯಾಗಿದೆ. ಯುವ ವಕೀಲರು ಸಂಘದ ಭವಿಷ್ಯ ಎಂದು ಹೇಳಿ ನೂತನ ತಂಡಕ್ಕೆ ಶುಭ ಹಾರೈಸಿದರು.

ಅಧಿಕಾರಿ ಹಸ್ತಾಂತರಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ರೈ ಜಿ. ನನ್ನ ಅವಧಿಯಲ್ಲಿ ಎಲ್ಲರೂ ಸೇರಿ ಉತ್ತಮ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಇದು ಪ್ರತಿಯೊಬ್ಬರ ಸಹಕಾರದಿಂದ ಆಗಿದೆ ಎಂದು ಹೇಳಿ ತನ್ನ ಅವಧಿಯಲ್ಲಿ ನಡೆದ ಕೆಲಸಗಳ ಮಾಹಿತಿ ನೀಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿ, ಪುತ್ತೂರು ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಸುಮಂಗಲ ಚಕಲಬ್ಬಿ ಮಾತನಾಡಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಮಾತನಾಡಿ ಶುಭಹಾರೈಸಿದರು.

ಪುತ್ತೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ, ಪುತ್ತೂರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ್ ವೈ.ಎಚ್., ಪುತ್ತೂರು ೧ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಆರ್. ರಮ್ಯಾ, ನಿಕಟಪೂರ್ವ ಉಪಾಧ್ಯಕ್ಷ ಮೋನಪ್ಪ ಎಂ., ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ ಎನ್., ನಿಕಟಪೂರ್ವ ಕೋಶಾಧಿಕಾರಿ ಮಹೇಶ್ ಕೆ. ಸವಣೂರು, ನಿಕಟಪೂರ್ವ ಜತೆ ಕಾರ್ಯದರ್ಶಿ ಮಮತಾ ಸುವರ್ಣ, ನೂತನ ಕೋಶಾಧಿಕಾರಿ ಭಾರತಿ ಎ., ನೂನತ ಜತೆ ಕಾರ್ಯದರ್ಶಿ ಉದಯಚಂದ್ರ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧಿಕಾರ ಹಸ್ತಾಂತರ:
2026-28ನೇ ಸಾಲಿನ ನೂತನ ಪದಾಧಿಕಾರಿಗಳಿಗೆ 2024-26ನೇ ಸಾಲಿನ ಪದಾಧಿಕಾರಿಗಳ ತಂಡ ಸಭೆಯ ನಡಾವಳಿ ಪುಸ್ತಕ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಸನ್ಮಾನ:
ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮತ್ತು ಹೈಕೋಟ್ ಹಿರಿಯ ವಕೀಲ ಹಾಗೂ ಕರ್ನಾಟಕ ಬ್ಯಾಂಕ್ ನಿರ್ದೇಶಕರೂ ಆಗಿರುವ ಡಾ| ಅರುಣ್ ಶ್ಯಾಮ್, ಮಂಗಳೂರು ಸರಕಾರಿ ಅಭಿಯೋಜಕರಾದ ಬಿ. ಮೋಹನ್ ಕುಮಾರ್ ಹಾಗೂ ೨೦೨೪-೨೬ನೇ ಸಾಲಿನ ಅಧ್ಯಕ್ಷ ಜೆ. ಜಗನ್ನಾಥ ರೈ, ಉಪಾಧ್ಯಕ್ಷ ಮೋನಪ್ಪ ಎಂ., ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ ಎನ್., ಕೋಶಾಧಿಕಾರಿ ಮಹೇಶ್ ಕೆ. ಸವಣೂರು, ಜತೆ ಕಾರ್ಯದರ್ಶಿ ಮಮತಾ ಸುವರ್ಣ, ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಪ್ರವೀಣ್ ಕುಮಾರ್ ಎಸ್., ಜಯಾನಂದ ಕೆ., ಮನೋಹರ ಎ.ರವರನ್ನು ವಕೀಲರ ಸಂಘದಿಂದ ಸನ್ಮಾನಿಸಲಾಯಿತು.

ನೂತನ ಪ್ರಧಾನ ಕಾರ್ಯದರ್ಶಿ ಸ್ವಾತಿ ಜಗನ್ನಾಥ ರೈ ಸ್ವಾಗತಿಸಿ ನೂತನ ಉಪಾಧ್ಯಕ್ಷ ಮಹಾಬಲ ಶೆಟ್ಟಿ ಕೊಮ್ಮಂಡ ವಂದಿಸಿದರು. ಅಶ್ವಿನಿ ಎಲ್. ಶೆಟ್ಟಿ ಹಾಗೂ ಸೀಮಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಆಟಿಡೊಂಜಿ ತುಳುವೆರೆ ಕೂಟ, ಬಹುಭಾಷಾ ಕವಿಗೋಷ್ಠಿ, ಜನಪದ ವಿಚಾರಗೋಷ್ಠಿ:
ಪದಸ್ವೀಕಾರ ಸಮಾರಂಭ ಬಳಿಕ ಆಟಿಡೊಂಜಿ ತುಳುವೆರೆ ಕೂಟ, ಬಹುಭಾಷಾ ಕವಿಗೋಷ್ಠಿ, ಜನಪದ ವಿಚಾರಗೋಷ್ಠಿ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಆಟಿಡೊಂಜಿ ಕೂಟ ಉದ್ಘಾಟಿಸಿ ಶುಭಹಾರೈಸಿದರು. ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಕಜೆ ಸಂಪನ್ಮೂಲ ವ್ಯಕ್ತಿಯಾಗಿ ಆಟಿಯ ಮಹತ್ವ ತಿಳಿಸಿದರು. ಹರಿಣಾಕ್ಷಿ ಎಜ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಉದಯಚಂದ್ರ ಕೆ. ವಂದಿಸಿದರು. ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಭಾಷೆಗಳಲ್ಲಿ ಕವನ ವಾಚಿಸಲಾಯಿತು. ಪುತ್ತೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರರವರು ಸ್ವ ಇಚ್ಚೆಯಿಂದ ರಚಿಸಿದ ಕವನ ವಾಚಿಸಿ ಎಲ್ಲರ ಗಮನ ಸೆಳೆದರು.

ಅಧ್ಯಕ್ಷ ಹುದ್ದೆ ಅಲ್ಲ ಅದು ನಂಬಿಕೆ, ಜವಾಬ್ದಾರಿ, ಅವಕಾಶ
ಪದಸ್ವೀಕಾರ ಮಾಡಿದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಮಾತನಾಡಿ ನನಗೆ ಓಟು ಹಾಕಿ ಗೆಲ್ಲಿಸಿದ ಒಂದಷ್ಟು ವಕೀಲರಿಗೆ ಮಾತ್ರ ನಾನು ಅಧ್ಯಕ್ಷ ಅಲ್ಲ. ವಕೀಲರ ಸಂಘದ ಸುಮಾರು ೬೦೦ ವಕೀಲರಿಗೆ ನಾನು ಅಧ್ಯಕ್ಷನಾಗಿದ್ದೇನೆ. ನೀವು ನೀಡಿದ್ದು ಒಂದು ಹುದ್ದೆ ಅಲ್ಲ ಅದು ನಂಬಿಕೆ, ಜವಾಬ್ದಾರಿ, ಒಂದು ಅವಕಾಶ ಮತ್ತು ಸಂಘವನ್ನು ಮುನ್ನಡೆಸುವ ಒಂದು ದೊಡ್ಡ ಕರ್ತವ್ಯವಾಗಿದೆ. ಪದಸ್ವೀಕಾರ ಮಾಡುವಾಗ ಒಮದು ಜವಾಬ್ದಾರಿಯ ಭಾವನೆಯೂ ಬಂದಿದೆ. ನನ್ನ ಹಿತಾಸಕ್ತಿಗಿಂತ ವಕೀಲರ ಹಿತಾಸಕ್ತಿ ಕಾಣುತ್ತದೆ . ಹಿರಿಯ ವಕೀಲರ ಮಾರ್ಗದರ್ಶನ, ಕಿರಿಯ ವಕೀಲರ ಉತ್ಸಾಹದಿಂದ ಸಂಘ ಬಲಿಷ್ಠವಾಗುತ್ತದೆ. ಸಂಘವೆಂಬುದು ಒಂದು ಕುಟುಂಬ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಹಿರಿಯ ವಕೀಲರ ಸಮಿತಿ ಸದಸ್ಯರಿಗೆ ವಕೀಲ ದಂಪತಿಗಳಿಗೆ ಸನ್ಮಾನ
ಹಿರಿಯ ವಕೀಲರ ಸಮಿತಿ ಸದಸ್ಯರುಗಳಾದ ಜಗನ್ನೀವಾಸ ರಾವ್, ನಿರ್ಮಲ ಕುಮಾರ್ ಜೈನ್ ಹಾಗೂ ಗೌರೀಶ್‌ಚಂದ್ರ ಶಾನುಭಾಗ್‌ರವರನ್ನು ಸನ್ಮಾನಿಸಲಾಯಿತು. ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ 8 ವಕೀಲ ದಂಪತಿಯನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here