






ನೆಲ್ಯಾಡಿ: 80ನೇ ಸ್ವಾತಂತ್ರ್ಯೋತ್ಸವಕ್ಕೆ ಕಡಬ ತಾಲೂಕಿನ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್ ಅವರ ಮನವಿ ಮೇರೆಗೆ 5 ಸಾವಿರ ಲಡ್ಡು ಪ್ರಸಾದ ನೀಡಲಾಗಿದ್ದು, ಇದನ್ನು ನೆಲ್ಯಾಡಿ ಗ್ರಾ.ಪಂ.ಮೂಲಕ ನೆಲ್ಯಾಡಿ ತಾ.ಪಂ.ವ್ಯಾಪ್ತಿಯ ವಿವಿಧ ಅಂಗನವಾಡಿ, ಶಾಲೆ, ಹಾಗೂ ಕಾಲೇಜುಗಳಿಗೆ ಆ.14ರಂದು ಸಂಜೆ ವಿತರಣೆ ಮಾಡಲಾಯಿತು.


ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರ ನೇತೃತ್ವದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಲಡ್ಡು ಪ್ರಸಾದ ಸಂಗ್ರಹಿಸಿಕೊಂಡು ನೆಲ್ಯಾಡಿ ಗ್ರಾ.ಪಂ.ಗೆ ತಂದು ನೆಲ್ಯಾಡಿ ತಾ.ಪಂ.ವ್ಯಾಪ್ತಿಯ ಅಂಗನವಾಡಿ, ಶಾಲೆ, ಹೈಸ್ಕೂಲ್, ಕಾಲೇಜುಗಳಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನೆಲ್ಯಾಡಿ ಗ್ರಾ.ಪಂ.ಪಿಡಿಒ ಜಯರಾಜ್, ಕಾರ್ಯದರ್ಶಿ ಭಾರತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.













