







ಪೆರಾಬೆ: ಕೋಚಕಟ್ಟೆ ನೂರುಲ್ ಹುದಾ ಮದ್ರಸ ಇದರ ವತಿಯಿಂದ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಕ್ಷ ಹಮೀದ್ ಆಜ್ಮೀರ್ ಅವರು ರಾಷ್ಟ್ರಧ್ವಜವನ್ನು ಹಾರಿಸಿ ಶುಭಾಶಯ ಕೋರಿದರು.



ಮದ್ರಸ ಪ್ರಧಾನ ಅಧ್ಯಾಪಕ ಮುಸ್ತಾಫ ಇರ್ಫಾನಿ ಅವರು ದುಃಆ ನೆರವೇರಿಸಿ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಮಹಾತ್ಮರನ್ನು ಸ್ಮರಿಸಿದರು. ಮದ್ರಸದ ಮಕ್ಕಳು ರಾಷ್ಟ್ರಗೀತೆ ಹಾಡಿದರು.ಕಾರ್ಯಕ್ರಮದಲ್ಲಿ ಮದ್ರಸದ ಮಾಜಿ ಅಧ್ಯಕ್ಷರುಗಳು, ಹಾಲಿ ಸಮಿತಿ ಸದಸ್ಯರು, ಮದ್ರಸ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಆಗಸ್ಟ್ 21ರಂದು ಕಡಬದಲ್ಲಿ ನಡೆಯಲಿರುವ ಸಂಯುಕ್ತ ಜಮಾಹತ್ ಖಾಝಿ ಸ್ವೀಕಾರ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.













