







ಪುತ್ತೂರು, ಆ.13: ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳಿಗೆ ಹೆಚ್ಚು ಮಹತ್ವ ನೀಡಬೇಕು. ಇಂದಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ಹೊರಬರಬೇಕಾದರೆ ಬಾಲ್ಯದಿಂದಲೇ ಆವಿಷ್ಕಾರದ ಮನಸ್ಸನ್ನು ಕಟ್ಟಿಕೊಳ್ಳಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎ.ಪಿ. ರಾಧಾಕೃಷ್ಣ ಹೇಳಿದರು.ಇವರು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಭಾರತಿ ಕರ್ನಾಟಕ, ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ (CBSE) ಮತ್ತು ವಿವೇಕಾನಂದ ಪದವಿ ಪೂರ್ವ ವಿದ್ಯಾಲಯ ಇವುಗಳ ಸಹಯೋಗದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ. ಮಾತನಾಡಿ, “ಮಕ್ಕಳ ಜೀವನವನ್ನು ರೂಪಿಸುವುದು ಶಿಕ್ಷಣ. ತರಗತಿಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಜ್ಞಾನಾಭಿವೃದ್ಧಿ, ಆತ್ಮವಿಶ್ವಾಸ ಮತ್ತು ಸೃಜನಾತ್ಮಕತೆ ಬೆಳೆಯುತ್ತದೆ” ಎಂದರು.ಈ ಸಂದರ್ಭದಲ್ಲಿ ಮಂಗಳೂರು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಂಜುನಾಥ ಬಿ. ಸಿಂಗೈ ಅವರನ್ನು ಸನ್ಮಾನಿಸಲಾಯಿತು.



ಕಾರ್ಯಕ್ರಮದಲ್ಲಿ ಜಿಲ್ಲೆಯ 30ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವೇದಿಕೆಯಲ್ಲಿ ಕ್ಷೇತ್ರೀಯ ನೈತಿಕ ಮತ್ತು ಆಧ್ಯಾತ್ಮಿಕ ಪ್ರಮುಖ್ ವೆಂಕಟರಮಣ, ವಿದ್ಯಾಭಾರತಿಯ ಪ್ರಾಂತ ವೇದ ಗಣಿತ ಪ್ರಮುಖ್ ಅಮರನಾಥ್, ಕೆನರಾ ಬ್ಯಾಂಕಿನ ಪ್ರತಿನಿಧಿ ಭಗವಾನ್ ಪ್ರಧಾನ್, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಂಚಾಲಕ ಭರತ್ ಪೈ, ವಿವೇಕಾನಂದ ಪ.ಪೂ. ಕಾಲೇಜು ಅಧ್ಯಕ್ಷ ರವೀಂದ್ರ ಪಿ., ಪ್ರಾಂಶುಪಾಲೆ ಸಿಂಧೂ ವಿ.ಜಿ. ಉಪಸ್ಥಿತರಿದ್ದರು.ಜಿಲ್ಲಾ ಗಣಿತ ವಿಜ್ಞಾನ ಪ್ರಮುಖ್ ರಘುರಾಮ ಸ್ವಾಗತಿಸಿದರು. ಗಣೇಶ್ ವಾಗ್ಲೆ ವಂದಿಸಿದರು. ಲತಾ ಶಂಕರಿ ಮತ್ತು ನಮಿತಾ ಮಣಿ ನಿರೂಪಿಸಿದರು.










