ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 80ನೇ ಸ್ವಾತಂತ್ರ್ಯೋತ್ಸವ

0

ಸುಳ್ಯ: ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಅನ್ಸಾರಿಯಾ ಎಜುಕೇಶನ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಲತೀಫ್ ಹರ್ಲಡ್ಕ ಧ್ವಜಾರೋಹಣ ನೆರವೇರಿಸಿದರು.ಶಾಲಾ ಸಂಚಾಲಕ ಹಾಗೂ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಯೋಜಕ ಶಾಫಿ ಕುತ್ತಾಮೊಟ್ಟೆ, ನಿಕಟ ಪೂರ್ವ ಸಂಚಾಲಕ ಹಾಜಿ ಎಸ್.ಎಂ.ಅಬ್ದುಲ್ ಹಮೀದ್, ರಕ್ಷಕ ಶಿಕ್ಷಕ ಸಂಘದ ಎಸ್.ಪಿ.ಅಬೂಬಕ್ಕರ್, ಎನ್.ಎ.ಅಬ್ದುಲ್ಲ, ಮಾಜಿ ಸಂಚಾಲಕ ಕೆ.ಎಂ.ಮುಹಿಯ್ಯದ್ದೀನ್ ಫ್ಯಾನ್ಸಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ ಸ್ವಾಗತಿಸಿದರು. ಶಿಕ್ಷಕ ರಂಜಿತ್ ವಂದಿಸಿದರು.

LEAVE A REPLY

Please enter your comment!
Please enter your name here