ಸ್ವಾತಂತ್ರೋತ್ಸವದ ಪ್ರಯುಕ್ತ ನಯಾ ಚಪ್ಪಲ್ ಬಜಾರ್ ರವರಿಂದ ಪ್ರಾಥಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

0

*468 ಸ್ಪರ್ಧಿಗಳು *206 ಸರಿಯುತ್ತರ ಬರೆದವರು *ಪ್ರಥಮ,ದ್ವಿತೀಯ,ತೃತೀಯ ಅಲ್ಲದೇ ಎಲ್ಲಾ ಸ್ಪರ್ಧಿಗಳಿಗೂ ಆಕರ್ಷಕ ಬಹುಮಾನಗಳು

ಪುತ್ತೂರು:ಕಲಿಯೋಣ, ಸ್ಪರ್ಧಿಸೋಣ, ದೇಶಪ್ರೇಮ ಮೆರೆಯೋಣ ಎಂಬ ಘೋಷವಾಕ್ಯದೊಂದಿಗೆ ಉದ್ಯಮದಲ್ಲಿ ಉತ್ತಮ ಗುಣಮಟ್ಟ, ಕಡಿಮೆ ಬೆಲೆ,  ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡಿರುವ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಪಾದರಕ್ಷೆ ಮಾರಾಟದಲ್ಲಿ ಸುಮಾರು 30 ವರ್ಷ ಅನುಭವ ಹೊಂದಿರುವ ನಯಾ ಚಪ್ಪಲ್ ಬಜಾರ್ ನಲ್ಲಿ ಈ ಬಾರಿಯೂ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ “ಸ್ವಾತಂತ್ರೋತ್ಸವ  ರಸಪ್ರಶ್ನೆ ಸ್ಪರ್ಧೆ-2026” ಏರ್ಪಡಿಸಿದ್ದು, ಇದರ ಫಲಿತಾಂಶ ಘೋಷಣೆ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಆ.15 ರಂದು ಮಳಿಗೆಯಲ್ಲಿ ಜರಗಿತು.

ದೇಶದ, ನೆಲದ, ಜಲದ, ಜನರ ಬಗ್ಗೆ ಅಭಿಮಾನವಿರಲಿ-ಪ್ರೊ|ದತ್ತಾತ್ರೇಯ ರಾವ್:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ಹಲವಾರು ಮಂದಿ ಯೋಧರು ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ ಪ್ರಾಣ ಅರ್ಪಿಸಿ ಹುತಾತ್ಮರಾಗಿದ್ದು ಸೈನಿಕರನ್ನು   ಗೌರವದಿಂದ ಕಾಣಬೇಕಾಗಿದೆ. ನಮ್ಮ ಭಾರತ ದೇಶವು ವಿವಿಧ ಜಾತಿಗಳಿಂದ ವೈವಿಧ್ಯಮಯ ದೇಶವಾಗಿದ್ದು ಅತ್ಯಂತ ಸುರಕ್ಷಿತ ದೇಶವಾಗಿದೆ. ನಾವು ದೇಶದ, ನೆಲದ, ಜಲದ, ಜನರ ಬಗ್ಗೆ ಅಭಿಮಾನವಿರಬೇಕು. ಶೇ.60 ಯುವಕರನ್ನು ಒಳಗೊಂಡ ಮ್ಯಾನ್ ಪವರ್ ನಮ್ಮ ದೇಶದಲ್ಲಿ ಯುವಕರು ದೇಶವನ್ನು ಸುಭದ್ರದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದರು.

ಕೆಟ್ಟ ಪ್ರೇರಣೆಯಿಂದ ಮುಕ್ತರಾಗಿ ಒಳ್ಳೆಯ ಪ್ರೇರಣೆಯನ್ನು ಹೊಂದೋಣ-ಮನೋರಮಾ ಸೂರ್ಯ:
ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಅಧ್ಯಕ್ಷೆ ಶ್ರೀಮತಿ ಮನೋರಮಾ ಸೂರ್ಯ ಮಾತನಾಡಿ, ಸೈನಿಕರ ತ್ಯಾಗದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಲಿರುವುದಾಗಿದೆ. ಅಂದು ಆದಂತಹ ಜನ ನಷ್ಟ, ಧನ ನಷ್ಟ ಭರಿಸಬೇಕಾದರೆ ಐವತ್ತು ವರ್ಷಗಳೇ ಹಿಡಿದವು. ಪ್ರತಿಯೊಬ್ಬ ವ್ಯಕ್ತಿ ಬೆವರು ಸುರಿಸಿದಿದ್ದರಿಂದಲೇ ಭಾರತವು ಇಂದು ವಿಶ್ವದಲ್ಲಿಯೇ ಗುರುತಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ನಮ್ಮ ಮನಸ್ಸಿನೊಳಗಿನ ಕೆಟ್ಟ ಮನಸ್ಸನ್ನು ಹೊರಗೆಡಹಿ ಓಳ್ಳೆಯ ಮನಸ್ಸನ್ನು ಹೊಂದುವಂತಾಗಬೇಕು. ಕೆಟ್ಟ ಪ್ರೇರಣೆಯಿಂದ ಮುಕ್ತರಾಗಿ ಒಳ್ಳೆಯ ಪ್ರೇರಣೆಯನ್ನು ಹೊಂದೋಣ ಎಂದರು.

ದೇಶದ, ದೇಶದ ಸೈನಿಕರಿಗೆ ಗೌರವ ಸೂಚಿಸಿ ದೇಶಪ್ರೇಮ ಮೆರೆಯೋಣ-ಮೊಹಮ್ಮದ್ ಶಾಕೀರ್:
ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಮೊಹಮ್ಮದ್ ಶಾಕೀರ್ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ರಫೀಕ್ ರವರು ತಮ್ಮ ಮಳಿಗೆಯನ್ನು ವಿಸ್ತರಿಸುವುದರ ಜೊತೆಗೆ ಒಳ್ಳೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ತನ್ನ ದುಡಿಮೆಯ ಲಾಭದ ಒಂದಂಶದ ಭಾಗದಿಂದ ಮಾಡುತ್ತಾ ಬಂದಿರುವುದು ಶ್ಲಾಘನೀಯ. ಇದೀಗ ಸ್ವಾತಂತ್ರ್ಯೋತ್ಸವದ ಬಗ್ಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವಲ್ಲಿ ಸಾಮಾಜಿಕ ಬದ್ಧತೆಯನ್ನು ಮೆರೆದಿರುತ್ತಾರೆ. ದೇಶಸೇವೆ ಮಾಡಿದ ಸೈನಿಕರ ಬಗ್ಗೆ ಹಾಗೂ ತನ್ನ ದೇಶ ಭಾರತದ ಬಗ್ಗೆ ಗೌರವ ಸೂಚಿಸುವ ಮೂಲಕ ದೇಶ ಪ್ರೇಮ ಬೆಳೆಸೋಣ ಎಂದರು.

ಪ್ರತಿ ತಿಂಗಳು ಒಂದಲ್ಲ ಒಂದು ಕಾರ್ಯಕ್ರಮ ರಫೀಕ್ ರವರ ಹೆಚ್ಚುಗಾರಿಕೆ-ಹೆರಾಲ್ಡ್ ಮಾಡ್ತಾ:
ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಹೆರಾಲ್ಡ್ ಮಾಡ್ತಾ ಮಾತನಾಡಿ, ರಫೀಕ್ ಹಾಗೂ ಅವರ ಪಾದರಕ್ಷೆ ಉದ್ಯಮ ಜನರಿಗೆ ಚಿರಪರಿಚಿತವಾಗಿದೆ. ವರ್ಷದ 365 ದಿವಸದ ಹನ್ನೆರಡು ತಿಂಗಳಿನ ಪ್ರತಿ ತಿಂಗಳಿಗೆ ಒಂದಲ್ಲ ಒಂದು ಕಾರ್ಯಕ್ರಮ ಮಳಿಗೆಯಲ್ಲಿ ಮಾಡುವ ಮೂಲಕ ನಮ್ಮನ್ನು ಸೇರಿಸಿಕೊಳ್ಳುವ ಪ್ರಯತ್ನ ಮೆಚ್ಚುವಂತಹುದು‌. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತ್ತೊಮ್ಮೆ ಜೊತೆಯಾಗೋಣ ಎಂದರು.

ನಿವೃತ್ತ ಸೈನಿಕ ಹಾಗೂ ಗ್ರಾಹಕ ಎನ್.ಭಾಸ್ಕರ್ ನಾಯ್ಕ್ ನಂದಿಲ, ರೋಟರಿ ಪುತ್ತೂರು ಸದಸ್ಯರಾದ ಪರಮೇಶ್ವರ ಗೌಡ, ವಾಮನ್ ಪೈ, ಸುಜಿತ್ ರೈ ಡಿ,  ಡಾ.ಅಶೋಕ್ ಪಡಿವಾಳ್, ಮನೋಜ್ ಟಿ.ವಿ, ರೋಟರಿ ಎಲೈಟ್ ಆಸ್ಕರ್ ಆನಂದ್, ಸುಧಾಕರ್ ಕೆ.ಪಿ, ನೌಶಾದ್ ಬೊಳ್ವಾರು ಸಹಿತ ಹಲವರು ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಳಿಗೆಯ ಪಾಲುದಾರ ರಫಿ ರಫೀಕ್ ಎಂ.ಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ನಯಾ ಚಪ್ಪಲ್ ಬಜಾರ್ ಪಾಲುದಾರ ಸಿದ್ಧೀಕ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಹೆಚ್ಚಿನ ಮಾಹಿತಿಗಾಗಿ ನಯಾ ಚಪ್ಪಲ್ ಬಜಾರ್, ಬುಶ್ರಾ ಟವರ್, ಮುಖ್ಯ ರಸ್ತೆ, ಪುತ್ತೂರು. ಮೊ:9448123569 ಸಂಪರ್ಕಿಸಬಹುದಾಗಿದೆ ಎಂದು ಮಳಿಗೆಯ ಪ್ರಕಟಣೆ ತಿಳಿಸಿದೆ.

ವಿಜೇತರ ಆಯ್ಕೆ/ಬಹುಮಾನ ವಿತರಣೆ…
ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು 468 ಮಂದಿ ಸ್ಪರ್ಧಿಗಳು ಪ್ರಶ್ನೆ ಪತ್ರಿಕೆಯನ್ನು ಪಡೆದಿದ್ದು ಅದರಲ್ಲಿ 206 ಮಂದಿ ಹತ್ತು ಪ್ರಶ್ನೆಗಳಿಗೆ ಸರಿಯುತ್ತರ ಬರೆದು ಹತ್ತು ಅಂಕಗಳನ್ನು ಪಡೆದಿರುತ್ತಾರೆ. ಆಯೋಜಕರು ಪ್ರಥಮ, ದ್ವಿತೀಯ, ತೃತೀಯ ಹಾಗೂ ಏಳು ಪ್ರೋತ್ಸಾಹಕ ಬಹುಮಾನಗಳು ಬಹುಮಾನಗಳನ್ನು ನೀಡಲು ಮೊದಲೇ ಉದ್ಧೇಶಿಸಿದ್ದರು. ಅದರಂತೆ ಚೀಟಿ ಎತ್ತುವ ಮೂಲಕ ಹತ್ತು ಮಂದಿ ವಿಜೇತರನ್ನು ಆಯ್ಕೆಗೊಳಿಸಿ ಬಹುಮಾನ ವಿತರಿಸಲಾಯಿತು. ಆದರೆ ಆಯೋಜಕರು ಮಕ್ಕಳ ಉತ್ಸಾಹ ಮನಗಂಡು ಉಳಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನಗಳನ್ನು ನೀಡಲು ನಿರ್ಧರಿಸಿರುತ್ತಾರೆ. ಸಮಾಧಾನಕರ ಬಹುಮಾನಕ್ಕೆ ಅರ್ಹರಾದವರು ಮಳಿಗೆಗೆ ಬಂದು ಬಹುಮಾನಗಳನ್ನು ಪಡೆದುಕೊಳ್ಳತಕ್ಕದ್ದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜೇತರು..
ಪ್ರಥಮ:ವಿನ್ಯಾ ಪಿ.ಸಾಮಾನಿ(ಬೆಥನಿ ದರ್ಬೆ)
ದ್ವಿತೀಯ: ಹರ್ಷಿನಿ(ಡಾ.ಅಂಬೇಡ್ಕರ್ ರೆಸಿಡೆನ್ಸಿಯಲ್ ಸ್ಕೂಲ್)
ತೃತೀಯ:ಧನ್ಯಶ್ರೀ(ಡಾ.ಅಂಬೇಡ್ಕರ್ ರೆಸಿಡೆನ್ಸಿಯಲ್ ಸ್ಕೂಲ್)

ಪ್ರೋತ್ಸಾಹಕ ಬಹುಮಾನಗಳು:
ಸ್ವಾತಿ, ಧನ್ಯಶ್ರೀ, ಯಶಸ್(ಡಾ.ಅಂಬೇಡ್ಕರ್ ರೆಸಿಡೆನ್ಸಿಯಲ್ ಸ್ಕೂಲ್), ಮುಹಮ್ಮದ್ ಅಯಾನ್(ಬೆಥನಿ ದರ್ಬೆ), ಭವಿಷ್, ಜಾನ್ವಿ ಕೆ.ಪಿ(ವಿವೇಕಾನಂದ ತೆಂಕಿಲ), ಜೋಯಲ್ ಮಾರಿಯೋ ಡಿ’ಸೋಜ (ಸಂತ ಫಿಲೋಮಿನಾ)

LEAVE A REPLY

Please enter your comment!
Please enter your name here