ರೋಟರಾಕ್ಟ್ ಕ್ಲಬ್ ತಿಂಗಳಾಡಿ ವತಿಯಿಂದ “ಆಟಿದ ಕೂಟ” ಕಾರ್ಯಕ್ರಮ

0

ಪುತ್ತೂರು : ರೋಟರಾಕ್ಟ್ ಕ್ಲಬ್ ತಿಂಗಳಾಡಿ ವತಿಯಿಂದ “ಆಟಿದ ಕೂಟ” ಕಾರ್ಯಕ್ರಮವು ಆ.15ರಂದು ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನೆರವೇರಿತು.

ಮುಖ್ಯ ಅತಿಥಿ, ಪತ್ರಕರ್ತೆ ಹಾಗೂ ಟಿವಿ ನಿರೂಪಕಿ ಹೇಮಾ ಜಯರಾಮ್ ರೈ ಆಟಿ ತಿಂಗಳ ಸಾಂಸ್ಕೃತಿಕ ಪ್ರಾಮುಖ್ಯತೆ ಮತ್ತು ಆಚರಣೆಯ ವಿಶೇಷತೆಗಳ ಕುರಿತು ಮಾತನಾಡಿ ಕ್ಲಬ್‌ನ “ನಮ್ಮ ಗ್ರಾಮ, ಸ್ವಚ್ಛ ಗ್ರಾಮ” ಅಭಿಯಾನದ ಪೋಸ್ಟರನ್ನು ಬಿಡುಗಡೆಗೊಳಿಸಿದರು. ರೋಟರಾಕ್ಟ್ ಕ್ಲಬ್‌ ತಿಂಗಳಾಡಿ ಅಧ್ಯಕ್ಷ Rtr ಪ್ರಜ್ವತ್ ರೈ, ನಿಕಟಪೂರ್ವ ಅಧ್ಯಕ್ಷRtr ನಿತೇಶ್ ರೈ ಮತ್ತು ಉಪಸ್ಥಿತರಿದ್ದರು.

ರೋಟರಿ ಪುತ್ತೂರು ಪೂರ್ವ ಅಧ್ಯಕ್ಷ Rtn PHF ರವಿಕುಮಾರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ Rtr ಅಕ್ಷತ್ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ಊರಿನ ಗಣ್ಯರು, ರೋಟರಾಕ್ಟ್ ಕ್ಲಬ್ ತಿಂಗಳಾಡಿಯ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕ್ಲಬ್ ವತಿಯಿಂದ ಹಲವು ಆಟಗಳನ್ನು ನಡೆಸಲಾಯಿತು.

LEAVE A REPLY

Please enter your comment!
Please enter your name here