







ಕೆಮ್ಮಾಯಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿ ಕೃಷ್ಣನಗರದಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಡೆಯಿತು.ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ ಧ್ವಜಾರೋಹಣ ಕಾರ್ಯವನ್ನು ನಿರ್ವಹಿಸಿದರು.ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ನಗರಸಭೆ ಅಧ್ಯಕ್ಷೆ ಲೀಲಾವತಿ, ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸಂಪನ್ಮೂಲ ವ್ಯಕ್ತಿ ಸ್ಥಳೀಯ ವಕೀಲೆ ಹರಿಣಾಕ್ಷಿ, ಮಾಜಿ ಪುರಸಭೆ ಸದಸ್ಯ ಉದಯ ಆಚಾರ್ಯ, ವಿನಾಯಕ ರೊಟ್ಟಿ ಫ್ಯಾಕ್ಟರಿ ಮಾಲೀಕ ಗುರುಪ್ರಸಾದ್ ಉಪಸ್ಥಿತರಿದ್ದು ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.ಶಾಲಾ ಮುಖ್ಯ ಗುರು ಮರಿಯಮ್ಮ ಪಿ.ಎಸ್ ಸರ್ವರನ್ನು ಸ್ವಾಗತಿಸಿದರು. ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಊರ ವಿದ್ಯಾಭಿಮಾನಿಗಳು, ಶಾಲಾ ಹಿತೈಷಿಗಳು, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಲಾ ದೈಹಿಕ ಶಿಕ್ಷಕಿ ಕುಸುಮಾತಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಶ್ರುತಿ ವಂದಿಸಿದರು.ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಭಾಷಣ, ದೇಶಭಕ್ತಿ ಗೀತೆಗಳು ಮತ್ತು ಏರೋಬಿಕ್ಸ್ ಕಾರ್ಯಕ್ರಮ ನಡೆಯಿತು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.ಅಡುಗೆ ಸಿಬ್ಬಂದಿಯವರು ಮಧ್ಯಾಹ್ನದ ರುಚಿಕರವಾದ ಬಿಸಿಯೂಟ ತಯಾರಿಸಿ ಉಣಬಡಿಸಿದರು. ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಸುಂದರ ಪೂಜಾರಿ ಬಡಾವು, ಗುರುಪ್ರಸಾದ್ ಹಾಗೂ ಪೋಷಕರು ಮಕ್ಕಳಿಗೆ ವಿವಿಧ ಸಿಹಿ ತಿಂಡಿಯನ್ನು ನೀಡಿ ಸಹಕರಿಸಿದರು.












