







ಗೋಳಿತಟ್ಟು: ಗೋಳಿತಟ್ಟು ಸರಕಾರಿ ಶಾಲೆಯಲ್ಲಿ “ಆಟಿಡ್ ಒಂಜಿ ದಿನ” ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.


ಕಾರ್ಯಕ್ರಮಕ್ಕೆ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ವಿಷ್ಣು ರಾಮ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಳು ನಾಡಿನಲ್ಲಿ ಆಚರಿಸುವ ಆಟಿ ತಿಂಗಳ ಮಹತ್ವ, ಆಟಗಳು, ಔಷಧಿಗಳು ಹಾಗೂ ಹಿಂದಿನ ಕಾಲದಲ್ಲಿನ ಜೀವನ ಕ್ರಮದ ಬಗ್ಗೆ ಸವಿವರವಾಗಿ ಮಾತನಾಡಿದರು.ಬಜತ್ತೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಕೆ ವಿ ಶೈಕ್ಷಣಿಕ ವಿಚಾರಗಳ ಬಗ್ಗೆ ಮಾತನಾಡಿದರು.




ಗೋಳಿತಟ್ಟು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ಸಂದರ್ಭೋಚಿತವಾಗಿ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಬಿ ಎಂ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕುದ್ಕೋಳಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸುಂದರ ಶೆಟ್ಟಿ ಪುರ, ಕುಶಾಲಪ್ಪ ಗೌಡ ಅನಿಲ, ಶೇಖರ ಗೌಡ ಅನಿಲಭಾಗ್, ನಾಸಿರ್ ಸಮರಗುಂಡಿ, ಗೋಳಿತೊಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜನಾರ್ದನ ಪಠೇರಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಹಸೀನಾ ಪರ್ವಿಂತಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಪೋಷಕರು ಆಟಿ ತಿಂಗಳಲ್ಲಿ ಬಳಸುತ್ತಿದ್ದ ವಿವಿಧ ಖಾದ್ಯಗಳನ್ನು ಮನೆಯಿಂದ ತಂದು ಪ್ರದರ್ಶಿಸಿ ಸಾಮೂಹಿಕ ಭೋಜನ ಮಾಡಲಾಯಿತು. ಶಾಲಾ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.










