ಬಡಗನ್ನೂರು ಶಾಲೆಯಲ್ಲಿ ಆಟಿಕೂಟ ಕಾರ್ಯಕ್ರಮ

0

ಬಡಗನ್ನೂರು: ಬಡಗನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ್ಯಾದ್ರಿ ಇಕೋ ಕ್ಲಬ್, ಶಾಲಾಭಿವೃದ್ಧಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಆಟಿಕೂಟ ಕಾರ್ಯಕ್ರಮ ಶಾಲಾ ಅಭಿಮಾನ ಸಭಾಂಗಣದಲ್ಲಿ ನಡೆಯಿತು.

 ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ  ನಾರಾಯಣ ರೈ ಕುದ್ಕಾಡಿ ರವರು ಚೆನ್ನೆಮಣೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ   ಬಡಗನ್ನೂರು ಸ. ಉ. ಹಿ. ಪ್ರಾ ಶಾಲಾ ನಿವೃತ್ತ ಪ್ರಭಾರ ಮುಖ್ಯ  ಶಿಕ್ಷಕಿ  ಹರಿಣಾಕ್ಷಿ ಎ ಆಟಿ ತಿಂಗಳ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.

ಮುಖ್ಯ ಅತಿಥಿಗಳಾಗಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಆಟಿ ತಿಂಗಳ ಆಚರಣೆ, ಅದರ ಉದ್ದೇಶಗಳು ಹಾಗೂ ಆಗಿನ ಕಾಲದ ಕಷ್ಟಕರ ಜೀವನದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೈ ಕುದ್ಕಾಡಿ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರ ಕಷ್ಟಕರ ಜೀವನದ ಸಂದರ್ಭದಲ್ಲಿ ನೈಸರ್ಗಿಕವಾಗಿ ದೊರೆಯುವ ಸೊಪ್ಪು ತರಕಾರಿಗಳನ್ನೇ ತಿಂದು ಸದೃಢರಾಗಿ ಬೆಳೆದು ಯಾವುದೇ ರೋಗ ರುಜಿನಗಳಿಲ್ಲದೆ ಆರೋಗ್ಯವಂತರಾಗಿದ್ದರು. ಆಟಿ ತಿಂಗಳಿನಲ್ಲಿ ಸೊಪ್ಪು ತರಕಾರಿಯಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡಲಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಎಸ್. ಡಿ. ಯಂ. ಸಿ ಅಧ್ಯಕ್ಷ  ಗಿರೀಶ್ ಗೌಡ ಕನ್ನಯ, ಗ್ರಾಮಪಂಚಾಯತ್  ನಿಕಟಪೂರ್ವ ಸದಸ್ಯ  ಸಂತೋಷ್ ಆಳ್ವ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಸುರೇಶ್ ರೈ ಪಳ್ಳತ್ತಾರು, ಕೋಶಾಧಿಕಾರಿ  ಸುಬ್ರಾಯ ನಾಯಕ್ ,  ರಾಜೇಶ್ ರೈ ಮೇಗಿನ ಮನೆ, ಎಸ್. ಡಿ. ಯಂ. ಸಿ ಮಾಜಿ ಅಧ್ಯಕ್ಷರಾದ ಮಹಾಲಿಂಗ ಪಾಟಾಳಿ, ಬಾಬು ಮೂಲ್ಯ, ಉಪಾಧ್ಯಕ್ಷೆ  ಸುಲೋಚನ ನೇರ್ಲಂಪಾಡಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಎಸ್. ಡಿ. ಯಂ. ಸಿ ಸದಸ್ಯರು,ಮಕ್ಕಳ  ಪೋಷಕರು ಅಕ್ಷರ ದಾಸೋಹ ಸಿಬ್ಬಂದಿಗಳು ಹಾಗೂ  ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಕುಮಾರ್ ಕೆ ಜೆ ಸ್ವಾಗತಿಸಿದರು.ಜಿಪಿಟಿ ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.ಶಿಕ್ಷಕಿ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿಯರಾದ ಮಧುಶ್ರೀ, ಲಕ್ಷಿ , ಸರಿತಾ ಕೆ, ಸೌಮ್ಯ ಸಹಕರಿಸಿದರು.

ಆಟಿ ವಿಶೇಷ ಖಾದ್ಯಗಳು:
ಪತ್ರೊಡೆ, ಪಾಕ್ ಚಟ್ನಿ, ಶುಂಠಿ ಚಟ್ನಿ, ಮಾವಿನ ಚಟ್ನಿ, ಮೆಂತೆ ಸೊಪ್ಪು ಚಟ್ನಿ, ಮಾವಿನ ಹುಳಿ ಸಾರು, ಸಜಂಕ್ ಪಲ್ಯ, ಆಟಿಸೊಪ್ಪು ಪಾಯಸ, ಹುರುಳಿ ಚಟ್ನಿ ,ಪಲ್ಯ,ನುಗ್ಗೆಸೊಪ್ಪು ಪಲ್ಯ, ಹಲಸಿನ ಬೀಜದ ಸಾಂಬಾರ್ ಹೀಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗಿತ್ತು.

LEAVE A REPLY

Please enter your comment!
Please enter your name here