‘ಪುತ್ತೂರು ಕ್ಲಬ್‌’ ವತಿಯಿಂದ ʼಮಾ ತುಜೇ ಪ್ರಣಾಂʼ

0

ಇಳಿಸಂಜೆಯಲ್ಲಿ ಮುದಗೊಳಿಸಿದ ದೇಶಭಕ್ತಿ ಸಂಗೀತ ರಸಮಂಜರಿ

ಪುತ್ತೂರು: 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಅಂಗವಾಗಿ ‘ಪುತ್ತೂರು ಕ್ಲಬ್‌’ ವತಿಯಿಂದ ʼಮಾ ತುಜೇ ಪ್ರಣಾಂʼ ಎಂಬ ದೇಶಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮ ಆ.14ರಂದು ಸಂಜೆ ಮರೀಲ್‌ ನಲ್ಲಿರುವ ಪುತ್ತೂರು ಕ್ಲಬ್‌ ನ ದೀಪಂ ಸಭಾಂಗಣದಲ್ಲಿ ನಡೆಯಿತು.

ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ಕ್ಲಬ್ ನ ಅಧ್ಯಕ್ಷರಾದ ಡಾ. ದೀಪಕ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡೈಜಿವರ್ಲ್ಡ್ ಸಂಸ್ಥೆಯ ಸಿಇಒ ವಾಲ್ಟರ್ ಮಾತನಾಡಿ, ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಪುತ್ತೂರು ಕ್ಲಬ್ ಗೆ ಧನ್ಯವಾದ. ನಾನು ಮೊದಲ ಬಾರಿಗೆ ಪುತ್ತೂರು ಕ್ಲಬ್ ಗೆ ಭೇಟಿ ನೀಡುತ್ತಿದ್ದೇನೆ. ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಶೆಣೈ ಅವರಿಗೆ ಧನ್ಯವಾದಗಳು. ಇಲ್ಲಿನ ಜಾಗ, ಪರಿಸರ ತುಂಬಾ ಚೆನ್ನಾಗಿದೆ. ಇದು ಭಾಷಣ ಮಾಡುವ ಸಮಯವಲ್ಲ. ದೇಶ ಭಕ್ತಿಗೀತೆಗಳನ್ನು ಆಲಿಸುವ ಸುಮಧುರ ಸಂಜೆ ಇದು. ಹಾಗಾಗಿ ಎಲ್ಲರೂ ಸುಮಧುರ ಗೀತೆಗಳನ್ನು ಆಲಿಸುವ ಮೂಲಕ ಕಾರ್ಯಕ್ರಮವನ್ನು ಇನ್ನಷ್ಟು ಅಂದಗಾಣಿಸುವ ಎಂದರು.

ನಿವೃತ್ತ ಯೋಧರಿಗೆ ಸನ್ಮಾನ:
ನಿವೃತ್ತ ಹವಾಲ್ದಾರರಾದ ವಿಶ್ವನಾಥ್, ಚಂದ್ರಶೇಖರ್, ಅಶೋಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಾರ, ಸ್ಮರಣಿಕೆ ನೀಡಿ ಅತಿಥಿಗಳು ಸನ್ಮಾನಿಸಿದರು.

ಸಂಗೀತಗಾರರಾದ ಸಂತೋಷ್ ಹೆಗ್ಡೆ, ಕಾರ್ಯಕ್ರಮದ ಪ್ರಾಯೋಜಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಎಕ್ಸ್ ಸರ್ವಿಸ್ ಮ್ಯಾನ್ ಅಸೋಸಿಯೇಷನ್ ನ ಅಧ್ಯಕ್ಷರಾದ ಎಸ್.ಜಿ.ಟಿ ವಸಂತ ಕುಮಾರ್, ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ. ದತ್ತಾತ್ರೇಯ ರಾವ್, ನಿವೃತ್ತ ಯೋಧ ಕರ್ನಲ್ ಗೋಪಾಲಕೃಷ್ಣ ಭಟ್, ಸುಹಾನ ಸಫರ್ ನ ಮುಖ್ಯಸ್ಥರಾದ ಡಾ.ಪ್ರಭು, ನಿವೃತ್ತ ಪ್ರಾಂಶುಪಾಲರಾದ ಝೇವಿಯರ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಂಬ್ಳೆ ಸಹೋದರರಿಂದ ಗಾನ ವೈಭವ
ಸಭಾ ಕಾರ್ಯಕ್ರಮದ ಬಳಿಕ ಕುಂಬ್ಳೆ ನರಸಿಂಹ ಪ್ರಭು, ಕುಂಬ್ಳೆ ಅನಂತ ಪ್ರಭು ಸಹೋದರರ ನೇತೃತ್ವದಲ್ಲಿ ಸುಹಾನ ಸಫರ್ ಸೀಸನ್-11 ‘ಮಾ ತುಜೇ ಪ್ರಣಾಮ್’ ಕಾರ್ಯಕ್ರಮ ಮೂಡಿಬಂತು. ಗಾಯಕರಾದ ಉಮಾಕಾಂತ್, ಮಾಲಿನಿ ಕೇಶವ ಪ್ರಸಾದ್, ತನ್ವಿ ಶೆಣೈ , ಅಪೇಕ್ಷಾ ಪೈ, ಪವಿತ್ರಾ ರೂಪೇಶ್ ಶೇಟ್, ರೋಹಿತ್ ಶೆಣೈ ಪುತ್ತೂರು, ಲಾಲಿತ್ಯ ಅನ್ವೆಕರ್ ಬಳಗದಿಂದ ಸುಮಧುರ ಗೀತೆಗಳ ಗಾಯನ ಇಳಿಸಂಜೆಯನ್ನು ಮುದಗೊಳಿಸಿತು.

ಸಂಗೀತ ಪ್ರೇಮಿಗಳು, ಉದ್ಯಮಿಗಳು ಇತರ ಸಂಸ್ಥೆಗಳ ಪದಾಧಿಕಾರಿಗಳ ಸಹಿತ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ. ದತ್ತಾತ್ರೇಯ ರಾವ್ ವಂದನಾರ್ಣೆಗೈದರು. ಕಾರ್ಯದರ್ಶಿ ವಿಶ್ವಾಸ್‌ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೆ.ವಿ ದಿವಾಕರ್‌ ಸಹಕರಿಸಿದರು.

ಸುದ್ದಿಯಲ್ಲಿ ನೇರಪ್ರಸಾರ
ಸಂಪೂರ್ಣ ಕಾರ್ಯಕ್ರಮವು ಸುದ್ದಿ ಲೈವ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ ಪ್ರಸಾರಗೊಂಡಿದೆ.

LEAVE A REPLY

Please enter your comment!
Please enter your name here