ವೈಫಲ್ಯಕ್ಕೆ ವಿದಾಯ, ಯಶಸ್ಸಿಗೆ ಮುನ್ನುಡಿ – ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ‘ವಿಂಶತಿಯ ಸಂಭ್ರಮ’

0

ಆರಂಭದಲ್ಲಿ ನಾನು ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಇಂದು ಈ ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದೇನೆ ಎಂಬ ಹೆಮ್ಮೆ ಇದೆ.”– ಗೋಕುಲ್‌ ನಾಥ್‌ ಪಿ.ವಿ

ಪುತ್ತೂರು : ಶಿಕ್ಷಣದಿಂದ ವಂಚಿತರಾದ ಹಾಗೂ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮತ್ತು ಉಜ್ವಲ ಭವಿಷ್ಯವನ್ನು ನೀಡುವ ಉದ್ದೇಶದಿಂದ ಕಳೆದ ಎರಡು ದಶಕಗಳಿಂದ ಶೈಕ್ಷಣಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಡಿರವ ಪುತ್ತೂರಿನ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ ತನ್ನ 20 ನೇ ವರ್ಷದ ʼವಿಂಶತಿ ಸಂಭ್ರಮʼ ವಾರ್ಷಿಕೋತ್ಸವನ್ನು ಆಚರಿಸಿತು.


ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ ಗೋಕುಲ್‌ ನಾಥ್‌ ಪಿ.ವಿ ಮಾತನಾಡಿ, ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಳೆದ ಕೇವಲ ಭೋಧನಾ ಅನುಭವಗಳಲ್ಲದೇ ಅನೇಕ ವಿದ್ಯಾರ್ಥಿಗಳ ಜೀವನದಲ್ಲಿ ಸ್ಪೂರ್ತಿದಾಯಕ ಬದಲಾವಣೆಗಳನ್ನು ಕಣ್ಣಾರೆ ಕಂಡ ಸಾರ್ಥಕ ಪಯಣವಾಗಿದೆ. ಆರಂಭದ ದಿನಗಳಿಂದ ಇಂದಿನವರೆಗಿನ ಸಂಸ್ಥೆಯ ಸಾಧನೆಗಳು,ಎದುರಿಸಿದ ಸವಾಲುಗಳು ,ಶಿಕ್ಷಕರ ಪರಿಶ್ರಮ , ಮಕ್ಕಳ ಸಹಕಾರ ಮತ್ತು ಪೋಷಕರ ಭರವಸೆಯಿಂದ ಸಂಸ್ಥೆಯು ಮತ್ತಷ್ಟು ಗಟ್ಟಿಯಾಗಿ ಹಿರಿಮೆಯಿಂದ ಮುನ್ನಡೆಯುತ್ತಿದೆ ಎಂದರು.ಪ್ರಗತಿಯ ಪ್ರಾರಂಭದ ದಿನಗಳಲ್ಲಿ ಸಂಸ್ಥೆಗೆ ಬೆನ್ನೆಲುಬಾಗಿ ಸಹಾಯಹಸ್ತವನ್ನು ತೋರಿ ಸಂಸ್ಥೆಯನ್ನು ಮುನ್ನಡೆಸಿದ ದಿ. ಅರ್ತಿಕಜೆ ಗಣಪತಿ ಭಟ್‌ ಅವರನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸುತ್ತಾ , ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಾಗ ನಾನು ಹೊಸಬನಾಗಿದ್ದೆ. ಶಾಲಾ ಭೋಧನಾ ವಿಧಾನ, ನಿರ್ವಹಣೆ ಹಾಗೂ ಶೈಕ್ಷಣಿಕ ನಿಯಮಗಳ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ.ಅಂತಹ ಸಂದರ್ಭದಲ್ಲಿ ನನ್ನನ್ನು ತಿದ್ದಿ ಮಾರ್ಗದರ್ಶನ ನೀಡಿದ ಗುರುಗಳು ಅವರು . ಇಂದು ನಾನು ಬೆಳೆದಿರುವುದಕ್ಕೆ ಅವರ ಪ್ರೋತ್ಸಾಹ , ಮಾರ್ಗದರ್ಶನ ಹಾಗೂ ಆಶಿರ್ವಾದವೇ ಕಾರಣ ಎಂದರು.


ಸಂಸ್ಥೆಯ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಮಾಧವಿ ಎನ್‌ ಸಿ ಮಾತನಾಡಿ, ಯಾವುದೇ ಒಂದು ವೃಕ್ಷ ಬೆಳೆಯಬೇಕಾದರೆ ಅದಕ್ಕೊಂದು ಸಣ್ಣ ಬೀಜ ಮತ್ತು ಅದಕ್ಕೆ ನೀರೆರೆಯುವ ಕೈಗಳು ಬೇಕು . ಅದೇ ರೀತಿ ಇಂದು ನಾವು ಕಾಣುತ್ತಿರುವ ಪ್ರಗತಿ ಸಂಸ್ಥೆಯು ರೂಪುಗೊಳ್ಳಲು ನಮ್ಮ ಸ್ಥಾಪಕರ ಕಠಿಣ ಪರಿಶ್ರಮ ಹಾಗೂ ತ್ಯಾಗವೇ ಕಾರಣ ಎಂದು ತಿಳಿಸುತ್ತಾ ಸಂಸ್ಥೆಯು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.


ಸಂಸ್ಥೆಯ ಎಲ್ಲಾ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್‌ , ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರದ ಉಪನ್ಯಾಸಕಿ ಮಧುಶ್ರೀ ಪ್ರಾರ್ಥಿಸಿದರು. ಹಾಗೂ ಅರ್ಥಶಾಸ್ತ್ರದ ಉಪನ್ಯಾಸಕ ಅಬ್ದುಲ್‌ ನಾಸಿರ್‌ ನಿರೂಪಿಸಿದರು.

20 ವರ್ಷಗಳ ಈ ಸಾರ್ಥಕ ಶೈಕ್ಷಣಿಕ ಪಯಣದಲ್ಲಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣವನ್ನಷ್ಟೇ ನೀಡದೆ,ಅವರಲ್ಲಿ ಆತ್ಮವಿಶ್ವಾಸ , ಪರಿಶ್ರಮ ,ಶಿಸ್ತು ಹಾಗೂ ಉನ್ನತ ಶಿಕ್ಷಣದ ಕನಸನ್ನು ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ,ಅವರನ್ನು ಪುನಃ ಶೈಕ್ಷಣಿಕ ಮುಖ್ಯವಾಹಿನಿಗೆ ತಂದು ,ಮುಂದಿನ ಹಂತದ ಶಿಕ್ಷಣಕ್ಕೆ ಸಿದ್ಧಗೊಳಿಸಿ ಸಂಸ್ಥೆಯ ಪಾತ್ರ ಗಮನಾರ್ಹವಾಗಿದೆ.


ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಆತ್ಮ ವಿಶ್ವಾಸ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಿ , ಅವರ ಶೈಕ್ಷಣಿಕ ಬದುಕಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಆರಂಭಗೊಂಡ ಪ್ರಗತಿ ಸ್ಟಡಿ ಸೆಂಟರ್‌ ಇಂದು ಹಲವಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಗೊಂಡಿದೆ.”ವಿದ್ಯಾರ್ಥಿಯ ವೈಫಲ್ಯವನ್ನು ಅಂತ್ಯವೆಂದು ಪರಿಗಣಿಸದೆ,ಅದನ್ನೇ ಯಶಸ್ಸಿನ ಮೊದಲ ಹೆಜ್ಜೆಯನ್ನಾಗಿ ಪರಿವರ್ತಿಸುವುದು”ಸಂಸ್ಥೆಯ ಪ್ರಮುಖ ಆಶಯವಾಗಿದೆ.


LEAVE A REPLY

Please enter your comment!
Please enter your name here