ರೋಟರಿ ಯುವ ಪ್ರಾಯೋಜಿತ ಶ್ರೀ ರಾಮಕೃಷ್ಣ ಇಂಟರಾಕ್ಟ್ ಕ್ಲಬ್ ಉದ್ಘಾಟನೆ

0

ನಾಯಕತ್ವ ರೂಪಿಸಲು ಯುವ ಸಮಾಜಸೇವೆ ಅಗತ್ಯ-ವಚನ ಜಯರಾಮ್ 

ಪುತ್ತೂರು: ಕೊಂಬೆಟ್ಟು ಬಂಟರ ಭವನದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಪ್ರಾಯೋಜಕತ್ವದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಶ್ರೀ ರಾಮಕೃಷ್ಣ ಇಂಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಾಯತ್ರಿ ಎಸ್. ನೆರವೇರಿಸಿ, ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಇಂಟರಾಕ್ಟ್ ಕ್ಲಬ್ ಅತ್ಯುತ್ತಮ ವೇದಿಕೆಯಾಗಿದೆ. ರೋಟರಿ ಕ್ಲಬ್ ಪುತ್ತೂರು ಯುವ ಸದಸ್ಯರು ಸಮಾಜ ಸೇವೆಯಲ್ಲಿ ಸದಾ ಮುಂದು ಹೇಳಿ  ಶುಭ ಹಾರೈಸಿದರು.

ರೋಟರಿ ಜಿಲ್ಲೆ 3181ರ ವಲಯ 5ರ ವಲಯ ಸೇನಾನಿ ಪಶುಪತಿ ಶರ್ಮ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿಸಿ ಮಾತನಾಡಿ, ಯುವಜನತೆ ಸಮಾಜಮುಖಿ ಚಿಂತನೆಗಳೊಂದಿಗೆ ಬೆಳೆಯಬೇಕು ಎಂದು ಕರೆ ನೀಡಿದರು.

ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ವಚನ ಜಯರಾಮ್ ರವರು ಸ್ವಾಗತಿಸಿ, ಮಾತನಾಡಿ, ಸಮಾಜ ಉತ್ತಮ ರೀತಿಯಲ್ಲಿ ಮುಂದುವರೆಯಬೇಕಾದರೆ ಯುವ ಸಮಾಜ ಮುಂದೆ ಬರಬೇಕು. ನಾಯಕತ್ವ ರೂಪಿಸಲು ಯುವ ಸಮಾಜ ಸೇವೆಯ ಅಗತ್ಯವಿದೆ ಎಂದರು. ರೋಟರಿ ಯುವ  ಕಾಂಟ್ಯಾಕ್ಟ್ ಚೇರ್ಮನ್ ಶಿವಪ್ರಕಾಶ್ ಕೈಂದಾಡಿ ಹಾಗೂ ಇಂಟರಾಕ್ಟ್ ಕೋ-ಆರ್ಡಿನೇಟರ್ ಡಾ. ಅನಿಲ ದೀಪಕ್ ಅವರು ನೂತನ ತಂಡಕ್ಕೆ ಶುಭಾಶಂಸನೆಗೈದರು. 

ಶಾಲಾ ಇಂಟರಾಕ್ಟ್ ಕ್ಲಬ್ ಉಸ್ತುವಾರಿಯಾಗಿ ಶಿಕ್ಷಕಿ ತುಳಸಿ ಬಿ. ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಪುತ್ತೂರು ಯುವ ಕಾರ್ಯದರ್ಶಿ ಅನೂಪ್ ಕೆ.ಜೆ. ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆ ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು..
ನೂತನ ಇಂಟರ್ಯಾಕ್ಟ್ ಅಧ್ಯಕ್ಷೆಯಾಗಿ ದ್ರಿಶಾ ಪಿ. (10ನೇ), ಉಪಾಧ್ಯಕ್ಷ ತ್ರಿಶಾಲ್ ಆಳ್ವ (9ನೇ), ಕಾರ್ಯದರ್ಶಿ ಬೃಂದಾ ಆರ್. ಕೆ. (10ನೇ), ಜಂಟಿ ಕಾರ್ಯದರ್ಶಿ ಉಪಜ್ಞಾ (9ನೇ), ಖಜಾಂಚಿ ಗಗನ್ (10ನೇ), ಕಮ್ಯುನಿಟಿ ಸರ್ವಿಸ್ ನಿರ್ದೇಶಕಿ ವೈಷ್ಣವಿ (10ನೇ), ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕಿ ಸ್ಮೃತಿ ಕೆ.(10ನೇ),  ಚೀಫ್ ಚೇರ್‌ಮನ್ ಅನೀಶ್ (9ನೇ), ಸಾರ್ಜಂಟ್ ಎಟ್ ಆರ್ಮ್ಸ್ ಪ್ರತೀಕ್ (10ನೇ) ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here