ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಮತ್ತು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು : ಮಂಗಳೂರಿನ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಆಸ್ಥಾ; 50 ಮೀ. ಬಟರ್‌ಫ್ಲೈ, 50 ಮೀ. ಬ್ಯಾಕ್‌ಸ್ಟ್ರೋಕ್, 100 ಮೀ. ಫ್ರೀಸ್ಟೈಲ್ ಈ ಮೂರು ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈಕೆ ಶಾಂತಿಗೋಡು ನಿವಾಸಿ ಅಭಿಲಾಷ್. ಯು.ಕೆ ಮತ್ತು ಶ್ರೀರಶ್ಮಿ. ಪಿ ದಂಪತಿ ಪುತ್ರಿ.

10ನೇ ತರಗತಿಯ ವಿದ್ಯಾರ್ಥಿನಿ ಲಾಸ್ಯ ಕಿಶನ್; 50 ಮೀ. ಫ್ರೀಸ್ಟೈಲ್, 50 ಮೀ. ಬಟರ್‌ಫ್ಲೈ, 50 ಮೀ. ಬ್ಯಾಕ್‌ಸ್ಟ್ರೋಕ್ ಈ ಮೂರು ವಿಭಾಗಗಳಲ್ಲೂ ಚಿನ್ನದ ಪದಕ ಗಳಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈಕೆ ಕಿಶನ್ ಡಿ. ಪಿ ಮತ್ತು ದೀನಾ ಕಿಶನ್ ದಂಪತಿ ಪುತ್ರಿ. 8ನೇ ತರಗತಿಯ ವಿದ್ಯಾರ್ಥಿ ಅನಿಕೇತ್ ರೈ 50 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಇಲ್ಲಿ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ 17ರ ವಯೋಮಾನದ ಬಾಲಕರ ತಂಡ ಮತ್ತು 14ರ ವಯೋಮಾನದ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಾಧನೆಗೈದಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here