ವಿಟ್ಲ: ಪಿಕಪ್ – ದ್ವಿಚಕ್ರ ವಾಹನದ ಮಧ್ಯೆ ಅಪಘಾತ : ಸಹೋದರಿಯರಿಬ್ಬರಿಗೆ ಗಾಯ

0

ವಿಟ್ಲ: ಪಿಕಪ್ ವಾಹನ ಹಾಗೂ ದ್ವಿಚಕ್ರವಾಹನದ ಮಧ್ಯೆ ನಡದ ಅಪಘಾತದಲ್ಲಿ ಸಹೋದರಿಯರಿಬ್ಬರು ಗಾಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮುಂಜೆ- ಕೂಟೇಲು-ಗುತ್ತಿನಬೈಲು ಸಂಪರ್ಕ ರಸ್ತೆಯಲ್ಲಿ ನಡೆದಿದೆ.


ಮಾಣಿಲ ಗ್ರಾಮದ ಗುತ್ತಿನಬೈಲು ನಿವಾಸಿ ಆನಂದ ಕುಲಾಲ್ ಅವರ ಪುತ್ರಿಯರಾದ ಕಾವ್ಯಶ್ರೀ(21 ವ.) ಹಾಗೂ ಮನ್ವಿತಶ್ರೀ(19 ವ.)ಗಾಯಗೊಂಡವರು. ಅವರಿಬ್ಬರು ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಪಿಕಪ್ ವಾಹನ ಮತ್ತು ಇವರ ದ್ವಿಚಕ್ರ ವಾಹನ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಅವರಿಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತದ ವೇಳೆ ಪಿಕಪ್ ವಾಹನ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here