







ನಿಡ್ಪಳ್ಳಿ; 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆ.15 ರಂದು ನಡೆಯಿತು.
ಎಸ್ .ಡಿ .ಎಮ್. ಸಿ ಕಾರ್ಯಾಧ್ಯಕ್ಷ ಮಾಧವ ಪೂಜಾರಿ ರೆಂಜ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶಿಕ್ಷಕರನ್ನು ಸನ್ಮಾನಿಸಿದರು.
ಹಿರಿಯರು ಮತ್ತು ಮಾಜಿ ಕಾರ್ಯಾಧ್ಯಕ್ಷರಾಗಿದ್ದ ಪರಮೇಶ್ವರ ಭಟ್ ಕೊನಡ್ಕ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿ, ಶಾಲೆಯು ಇನ್ನೂ ಅಭಿವೃದ್ಧಿ ಹೊಂದಲಿ ಮತ್ತು ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದು ಸತ್ಪ್ರಜೆಗಳಾಗಿ ಬಾಳಿ ಎಂದು ಹರಸಿದರು. ಎಸ್ .ಡಿ.ಎಂ.ಸಿ ಸದಸ್ಯರಾದ ಅಬ್ಬೂಬಕ್ಕರ್ ಕೊರಿಂಗಿಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು .
ಶಾಲೆಯ ಹಿರಿಯ ವಿದ್ಯಾರ್ಥಿ ಮತ್ತು N inetroTech ಕಂಪನಿಯ ಮಾಲಕ ಅಬ್ದುಲ್ ಶಮೀರ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ವಾತಿ ,ಶೃತಿ ,ಸುಪ್ರಿತರಿಗೆ ತಲಾ 5,000 ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುರಿ ಇಟ್ಟು ವಿದ್ಯಾಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದರು.ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿಗಳಿಗೆ ಫೈಲ್ ಮತ್ತು ಶಾಲಾವತಿಯಿಂದ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಸ್ವಾತಿ ಮತ್ತು ರಕ್ಷಿತಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲಾವತಿಯಿಂದ ಹಿರಿಯ ವಿದ್ಯಾರ್ಥಿಯಾದ ಅಬ್ದುಲ್ ಶಮೀರ್ ಮತ್ತು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್ ತರಬೇತಿ ನೀಡಿದ ಶಾಲೆಯ ಪೋಷಕ ಶಿವರಾಮ ನಿಡ್ಪಳ್ಳಿ ಇವರನ್ನು ಗೌರವಿಸಲಾಯಿತು .ಅಡುಗೆ ಸಿಬ್ಬಂದಿಗಳಾದ ಐರಿನ್ ಡಿಸೋಜಾ ಮತ್ತು ಲಲಿತ ಇವರನ್ನು ಎಸ್.ಡಿ.ಎಂ ಸಿ ಸದಸ್ಯರಾದ ಶಶಿಕಲಾ ಮಂಜಲ್ ಕುಂಜ ಇವರನ್ನು ಗೌರವಿಸಲಾಯಿತು.
ಒಂಬತ್ತನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಮರಿಯತ್ ಆಪ್ನಾ ಸ್ವಾಗತಿಸಿ, ಗಗನ್ ವಂದಿಸಿದರು. ಶ್ರೀಯ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಸ್ಥಾನ ಪಡೆದ ಸ್ವಾತಿ ಸಿಹಿತಿಂಡಿ ಮತ್ತು ಶಿಕ್ಷಕಿ ಸಿಂಧು ವಿ.ಕೆ. ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು .ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ,ಪೋಷಕರು, ಎಸ್ .ಡಿ.ಎಂ. ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು












