







ಪುತ್ತೂರು: ಮುಲ್ಕಿಯ ಪಂಜಿನಡ್ಕ ಅನುದಾನಿತ ಕೆಪಿಎಸ್ಕೆ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕಿಶೋರ ವರ್ಗದ ಬಾಲಕರ ಆರ್ಟಿಸ್ಟಿಕ್ ಯೋಗಾಸನದಲ್ಲಿ ಅಭಿರಾಮ್ ಶರ್ಮ ಮತ್ತು ತಸ್ಮಯ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.



ಇತರೆ ಫಲಿತಾಂಶಗಳು:
ದ್ವಿತೀಯ ಸ್ಥಾನ: ಶ್ರೀಶ – ಸಾಂಪ್ರದಾಯಿಕ ಯೋಗಾಸನ, ಹರ್ಷಿತ್ – ಆರ್ಟಿಸ್ಟಿಕ್ ಸಿಂಗಲ್
ತೃತೀಯ ಸ್ಥಾನ: ವೈರಾಜ್ ಮತ್ತು ಶಿವಪ್ರಸಾದ್ – 17ರ ರಿದಮಿಕ್, ಪ್ರತೀಕ್ ಮತ್ತು ರತನ್ – 14ರ ರಿದಮಿಕ್, ಮನ್ವಿತ ಮತ್ತು ಚಿಸ್ಮಿತ – 17ರ ಬಾಲಕಿಯರ ಆರ್ಟಿಸ್ಟಿಕ್, ಸಾನ್ವಿಕೆ ಮತ್ತು ವಿ. ಅನನ್ಯ – 14ರ ಆರ್ಟಿಸ್ಟಿಕ್, ಪೂಜಿತ ಮತ್ತು ಕೇಶಿಕ – 14ರ ರಿದಮಿಕ್ ಬಾಲಕಿಯರು ಕಿಶೋರ್ ವರ್ಗದ ಬಾಲಕರ ತಂಡ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದಿದೆ.

















