ದರ್ಬೆತ್ತಡ್ಕ ಶಾಲಾ ವಿದ್ಯಾರ್ಥಿ ನವೋದಯ ಶಾಲೆಗೆ ಆಯ್ಕೆ

0


ಬಡಗನ್ನೂರುಃ 2025-26 ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ನವೋದಯ ಪರೀಕ್ಷೆಯಲ್ಲಿ ದರ್ಬೆತ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ತಸ್ವಿನ್ ಆರ್ ಹೆಚ್ ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುತ್ತಾನೆ.

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿರುವ ನವೋದಯ ವಿದ್ಯಾಲಯ ಸಮಿತಿ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 6 ರಿಂದ 12 ನೇ ತರಗತಿಯವರೆಗೆ ಸಂಪೂರ್ಣ ಉಚಿತ ಗುಣಮಟ್ಟದ ವಸತಿ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರತಿವರ್ಷ ಐದನೇ ತರಗತಿಯಲ್ಲಿ ಓದುವ ಮಕ್ಕಳಿಗೆ ನವೋದಯ ಪರೀಕ್ಷೆಯನ್ನು ನಡೆಸುತ್ತಿದೆ.

ಒಳಮೊಗ್ರು ಗ್ರಾಮದ ದರ್ಬೆ ನಿವಾಸಿ ರವಿ ಕೆ ಮತ್ತು ಹರ್ಷಿಣಿ ಟಿ ಜಿ ದಂಪತಿಗಳ ಪುತ್ರನಾದ ತಸ್ವಿನ್ ಆರ್ ಹೆಚ್ ಪೋಷಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಸಾಧನೆಯನ್ನು ಮಾಡಿರುತ್ತಾನೆ. ಪ್ರತಿಭಾನ್ವಿತ ವಿದ್ಯಾರ್ಥಿಯಾದ ಇವನ ಸಾಧನೆಯನ್ನು ಶಾಲಾ ಎಸ್. ಡಿ. ಯಂ. ಸಿ ಅಧ್ಯಕ್ಷರ, ಪದಾಧಿಕಾರಿಗಳು, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಹಿರಿಯ ವಿದ್ಯಾರ್ಥಿಗಳು ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here