ಹಾರಾಡಿ: 72ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಇದರ ಪ್ರಯುಕ್ತ ಡ್ರಾಯಿಂಗ್ ಸ್ಪರ್ಧೆ

0

ಹಾರಾಡಿ: ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಎಲ್ಲಿ 72ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಇದರ ಪ್ರಯುಕ್ತ ಡ್ರಾಯಿಂಗ್ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಲ್ಲಾಸ್ ಉಪವಲಯ ಅರಣ್ಯ ಅಧಿಕಾರಿ ಪುತ್ತೂರು ಇವರು ಮಾತನಾಡುತ್ತಾ “ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಈ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ವಿದ್ಯಾರ್ಥಿಗಳು ಪ್ರಾಣಿಗಳ ಬಗ್ಗೆ ದಯೆ ಕಾಳಜಿ ವಹಿಸಬೇಕು, ಇದನ್ನು ಸಾರುವುದೇ ಡ್ರಾಯಿಂಗ್ ಸ್ಪರ್ಧೆಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬೀಟ್ ಪೋರೆಸ್ಟರ್ ಆಗಿರುವ ಜಿತೇಶ್, ಭಾಗ್ಯ, ದೇವಿ ಪ್ರಸಾದ್, ರಘು ಅವರ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಕೆಕೆ ಮಾಸ್ಟರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಗೈದರು. ಶಿಕ್ಷಕಿ ಧನ್ಯ ಕುಮಾರಿ ಇವರು ಧನ್ಯವಾದಗಳು, ಜಿಪಿಟಿ ಶಿಕ್ಷಕ ಜನಾರ್ಧನ ದುರ್ಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here