ಹೊಸಮಜಲು: ಗ್ಯಾರೇಜ್‌ನಿಂದ ಬೈಕ್ ಕಳ್ಳತನ-ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ

0

ನೆಲ್ಯಾಡಿ: ಇಲ್ಲಿಗೆ ಸಮೀಪದ ಹೊಸಮಜಲು ಸಮೀಪ ಗ್ಯಾರೇಜ್‌ನಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳವು ಆಗಿರುವ ಘಟನೆ ಆ.21ರಂದು ಮುಂಜಾನೆ ನಡೆದಿದೆ. ಆ.22ರಂದು ಬೆಳಗ್ಗೆ ಬೈಕ್ ಮಣ್ಣಗುಂಡಿಯಲ್ಲಿ ಪತ್ತೆಯಾಗಿದೆ.


ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ನ ಹ್ಯಾಂಡಲ್ ಲಾಕ್ ಮುರಿದ ಇಬ್ಬರು ಅಪರಿಚಿತರು ಬೈಕ್ ಕಳವು ಮಾಡಿಕೊಂಡು ಹೋಗುತ್ತಿರುವುದು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬೈಕ್ ಆ.22ರಂದು ಬೆಳಗ್ಗೆ ಮಣ್ಣಗುಂಡಿ ಸೇತುವೆ ಸಮೀಪ ಪತ್ತೆಯಾಗಿದೆ. ಬೈಕ್‌ನಲ್ಲಿದ್ದ ಪೆಟ್ರೋಲ್ ಖಾಲಿಯಾದ ಹಿನ್ನೆಲೆಯಲ್ಲಿ ಕಳ್ಳರು ಬೈಕ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಹಿಂದೆಯೂ ಬೈಕ್ ಕಳ್ಳತನ;
ಹೊಸಮಜಲು ಭಾಗದಲ್ಲಿ ಈ ಹಿಂದೆ ಸಹ ಬೈಕ್ ಕಳ್ಳತನ ನಡೆದಿದೆ. ಮೇ.2ರಂದು ಹೊಸಮಜಲು ಸಮೀಪದ ಬರೆಗುಡ್ಡೆ ಎಂಬಲ್ಲಿ ಮನೆಯೊಂದರ ಬಳಿ ನಿಲ್ಲಿಸಿದ್ದ ಬೈಕ್ ಕಳವಾಗಿತ್ತು. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಇದುವರೆಗೆ ಬೈಕ್ ಪತ್ತೆಯಾಗಿಲ್ಲ. ವ್ಯವಸ್ಥಿತ ಕಳ್ಳರ ಜಾಲ ಇರುವ ಶಂಕೆ ವ್ಯಕ್ತವಾಗುತ್ತಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here