







ಪುತ್ತೂರು: ಪದವಿ ಪೂರ್ವ ವಿದ್ಯಾಲಯ, ವಿವೇಕಾನಂದ ಕಾಲೇಜು, ನೆಹರೂ ನಗರ ಪುತ್ತೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ , ಉಪ್ಪಿನಂಗಡಿ ವೇದಶಂಕರನಗರ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.


ಬಿ. ಅಭಿರಾಮ ಶರ್ಮ (9ನೇ ತರಗತಿ, ಕೆಮ್ಮಾರ ನಿವಾಸಿ ಬಿ. ಮಹಾಬಲೇಶ್ವರ ಭಟ್ ಮತ್ತು ವಾಣಿ ದಂಪತಿಯ ಪುತ್ರ) ಮತ್ತು ತಸ್ಮಯ್ ಎಂ (8ನೇ ತರಗತಿ, ಇಳಂತಿಲ ಮಿತ್ತಿಲ ನಿವಾಸಿ ಡೀಕಯ ಗೌಡ ಎಂ ಮತ್ತು ಉಮಾವತಿ ದಂಪತಿಗಳ ಪುತ್ರ) ಅವರು ಕಿಶೋರ ವರ್ಗದ ಆರ್ಟಿಸ್ಟಿಕ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.













