ಮಂಗಳೂರಿನಲ್ಲಿ ವಿಜಯಲಕ್ಷ್ಮಿ ದರ್ಶನ್ ಜೊತೆ ಆರೋಪಿ ಪುತ್ತೂರು ಮೂಲದ ಗೌರವ್ ಶೆಟ್ಟಿ..!

0

ಪುತ್ತೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಒಬ್ಬರನ್ನು ಬಂಧಿಸಿದ್ದು, ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ ಪುತ್ತೂರು ಮೂಲದ ಆರೋಪಿಯೊಬ್ಬರು ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರೊಟ್ಟಿಗೆ ಮಂಗಳೂರಿನಲ್ಲಿ ಕಾಣಿಸಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.


ಪುತ್ತೂರು ನೆಲ್ಲಿಕಟ್ಟೆಯ ಗೌರವ್ ಶೆಟ್ಟಿ ಎಂಬವರು ವಿಜಯಲಕ್ಷ್ಮೀ ದರ್ಶನ್ ಜೊತೆ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮಿ ಅವರು ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ದೈವಾರಾಧನೆಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಾಕ್ಷ್ಯಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ಮಂಗಳೂರಿನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಸ್ವಾಗತಿಸಿದ್ದು, ಈ ಕುರಿತಾದ ವಿಡಿಯೋ ಹರಿದಾಡುತ್ತಿದೆ.

ಸಾಕ್ಷ್ಯಗಳಿಗೆ ಬೆದರಿಕೆ ಪ್ರಕರಣದಲ್ಲಿ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಅವರುಗಳು ಸಹ ಹಸ್ತಕ್ಷೇಪದ ಬಗ್ಗೆ ಪೊಲೀಸರಿಗೆ ಅನುಮಾನವಿತ್ತು. ಈ ಇಬ್ಬರಿಗೂ ಪೊಲೀಸರು ನೊಟೀಸ್ ನೀಡುವ ಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಈ ಆರೋಪಿಗಳಿಬ್ಬರೂ ಪೊಲೀಸರ ಸಂಪರ್ಕಕ್ಕೆ ಸಿಗದೆ ತಲೆ ಮರೆಸಿಕೊಂಡಿದ್ದರು. ಆದರೆ ಇದೀಗ ಗೌರವ್ ಶೆಟ್ಟಿ, ವಿಜಯಲಕ್ಷ್ಮಿ ದರ್ಶನ್ ಅವರೊಟ್ಟಿಗೆ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ವಿಜಯಲಕ್ಷ್ಮಿ ದರ್ಶನ್ ಅವರು ಮಂಗಳೂರಿಗೆ ಹೋಗಿದ್ದರು. ಆಗ ಗೌರವ್ ಶೆಟ್ಟಿ, ವಿಜಯಲಕ್ಷ್ಮಿ ಮತ್ತು ಅವರ ಗೆಳತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದ್ದಾನೆ. ಮಂಗಳೂರಿನ ಶ್ರೀ ಮಂದಾರ ಧರ್ಮ ಚಾವಡಿಗೆ ವಿಜಯಲಕ್ಷ್ಮಿ ತೆರಳಿದ್ದರು. ಈ ವೇಳೆ ಗೌರವ್ ಶೆಟ್ಟಿ ಸಹ ಜೊತೆಯಲ್ಲಿದ್ದರು ಎನ್ನಲಾಗಿದೆ. ಗೌರವ್ ಶೆಟ್ಟಿ, ವಿಜಯಲಕ್ಷ್ಮಿ ಅವರನ್ನು ವಿಮಾನ ನಿಲ್ದಾಣದ ಹೊರಗೆ ಸ್ವಾಗತ ಮಾಡಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

LEAVE A REPLY

Please enter your comment!
Please enter your name here