ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಾಂತೀಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಣಿತ –ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವವು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನೆಹರು ನಗರದಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

  ಬಾಲ ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ವಿದ್ಯುತ್ ಶಕ್ತಿ ಸಂರಕ್ಷಣೆ’ ಎಂಬ ವಿಷಯದಲ್ಲಿ 6ನೇ ತರಗತಿಯ ವಿಹಾನ್ ಆರ್ ಕೆ (ರಾಜೇಶ್ ಕೆ ಮತ್ತು ಅಕ್ಷತಾ ಎ ಪಿ ದಂಪತಿ ಪುತ್ರ) ಪ್ರಥಮ ಸ್ಥಾನ, ಸೆನ್ಸಾರ್ ವಿಜ್ಞಾನ ಮಾದರಿ ತಯಾರಿಯಲ್ಲಿ 7ನೇ ತರಗತಿಯ ನಿಶಾಮ್ ಬೈಲಾಡಿ (ಮಹೇಶ್ ಬೈಲಾಡಿ ಮತ್ತು ಸವಿತಾ ಕೆ ಎ ದಂಪತಿ ಪುತ್ರ) ದ್ವಿತೀಯ ಸ್ಥಾನ, ‘ಘರ್ಷಣೆ: ಮಿತ್ರ ಮತ್ತು ಶತ್ರು’ ಎಂಬ ವಿಷಯದಲ್ಲಿ 6ನೇ ತರಗತಿಯ ತ್ರಿಶಾನ್ ಬಿ ಶೆಟ್ಟಿ (ಭಾಸ್ಕರ್ ಬಿ ಶೆಟ್ಟಿ ಮತ್ತು ಆಶಾ ಕೆ ಶೆಟ್ಟಿ ದಂಪತಿ ಪುತ್ರ) ತೃತೀಯ ಸ್ಥಾನ ಮತ್ತು ಸಂಸ್ಕೃತಿ ಮಹೋತ್ಸವದ ‘ಕಥಾ ಕಥನ’ ಸ್ಪರ್ಧೆಯಲ್ಲಿ  7ನೇ ತರಗತಿಯ ಆರಾಧ್ಯ ಕೃಷ್ಣ ( ಕೃಷ್ಣಪ್ರಸಾದ ಮತ್ತು ವಿದ್ಯಾ ಎಂ ಕೆ ದಂಪತಿ ಪುತ್ರಿ) ತೃತೀಯ ಸ್ಥಾನ ಪಡೆದಿರುತ್ತಾರೆ.

   ಕಿಶೋರ ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ಸೆನ್ಸಾರ್ ವಿಜ್ಞಾನ ‘ಮಾದರಿ’ ಎಂಬ ವಿಷಯದಲ್ಲಿ 10ನೇ ತರಗತಿಯ ಕ್ಷಮೇತ್ ಜೈನ್ (ಹನೀಶ್ ಕುಮಾರ್ ಮತ್ತು ಶ್ರುತಿ ವೈ ದಂಪತಿ ಪುತ್ರ) ಪ್ರಥಮ ಸ್ಥಾನ, ‘ಚಲನೆ ಆಧಾರಿತ ಮಾದರಿ’ ಎಂಬ ವಿಷಯದಲ್ಲಿ 9ನೇ ತರಗತಿಯ ಸಾನ್ವಿ ಡಿ ( ದೀಪಕ್ ಕೆ ಮತ್ತು ಯಶೋಧ ಕೆ ದಂಪತಿ ಪುತ್ರಿ) ದ್ವಿತೀಯ ಸ್ಥಾನ,  ‘ಮಾನವನ ಹೃದಯದ ಕಾರ್ಯವಿಧಾನ’ ವಿಷಯದಲ್ಲಿ 10ನೇ ತರಗತಿಯ  ನಮೀಶ್ ಪೂಜಾರಿ ( ಸತೀಶ್ ಪೂಜಾರಿ ಮತ್ತು ಜಯಶ್ರೀ ದಂಪತಿ ಪುತ್ರ) ತೃತೀಯ ಸ್ಥಾನ, ‘ವಿಜ್ಞಾನ ಪ್ರಯೋಗ’ ಸ್ಪರ್ಧೆಯಲ್ಲಿ 10ನೇ ತರಗತಿಯ  ವೈಷ್ಣಿ ರೈ ( ಜಗನ್ನಾಥ ಎಂ ಮತ್ತು ಸೀಮಾ ಜೆ ರೈ ದಂಪತಿ ಪುತ್ರಿ) ದ್ವಿತೀಯ ಸ್ಥಾನ, ‘ಗಣಿತ ಪತ್ರವಾಚನ’ ಸ್ಪರ್ಧೆಯಲ್ಲಿ 10ನೇ ತರಗತಿಯ  ಅತೀತ್ ಹೆಚ್ ರೈ ( ಹರೀಶ್ ರೈ ಪಿ ಮತ್ತು ಜಲಜ ಹೆಚ್ ರೈ ದಂಪತಿ ಪುತ್ರ) ಪ್ರಥಮ ಸ್ಥಾನ,  ಗಣಿತ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ಪ್ರಮೇಯ ಹಾಗೂ ಉಪ ಪ್ರಮೇಯ ಸಿದ್ಧಾಂತಗಳ ಆಧಾರಿತ ಪ್ರತಿರೂಪ’ ವಿಷಯದಲ್ಲಿ 10ನೇ ತರಗತಿಯ ನಾಗಭೂಷಣ ಕಿಣಿ ( ನಾಗರಾಜ್ ಕಿಣಿ ಮತ್ತು  ನಮ್ರತಾ ಕಿಣಿ ದಂಪತಿ ಪುತ್ರ) ತೃತೀಯ ಸ್ಥಾನ, ಸಂಸ್ಕೃತಿ ಮಹೋತ್ಸವದ ‘ರಸಪ್ರಶ್ನೆ’ ಸ್ಪರ್ಧೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯರಾದ ಚಿಂತನ ಎಂ ( ಸೀತಾರಾಮ ಎಂ ಮತ್ತು ಸರೋಜ ಕೆ ದಂಪತಿ ಪುತ್ರಿ), ಸಾಯಿ ಪ್ರಿಯ ಎಚ್( ಡಾ. ಶಿವಾನಂದ ಎಚ್ ಮತ್ತು ಅರ್ಪಣಾ ಎಸ್ ಭಟ್ ದಂಪತಿ ಪುತ್ರಿ) ಮತ್ತು ನಿನಾದ ಎಂ ಎನ್ ( ಎಮ್ ಕೆ ನವೀನ್ ಕುಮಾರ್ ಮತ್ತು ಅರ್ಚನ ಬಿ ವಿ ದಂಪತಿ ಪುತ್ರಿ) ಇವರ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಬಾಲ ವರ್ಗ ಹಾಗೂ ಕಿಶೋರ ವರ್ಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here