ಬಿದ್ದು ಸಿಕ್ಕ ಪರ್ಸ್ ಹಿಂದುರಿಗಿಸಿ ಮಾನವೀಯತೆ

0

ಉಪ್ಪಿನಂಗಡಿ: ಹಾಸನ ಬಸ್ ನಿಲ್ದಾಣದಲ್ಲಿ ಬಿದ್ದು ಸಿಕ್ಕಿದ ನಗದು ಹಾಗೂ ಅಮೂಲ್ಯ ದಾಖಲೆಗಳನ್ನು ಹೊಂದಿದ್ದ ಪರ್ಸನ್ನು ಅದರ ವಾರೀಸುದಾರರನ್ನು ಪತ್ತೆ ಹಚ್ಚಿ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.


ಕೇರಳದ ಕಣ್ಣೂರು ನಿವಾಸಿ ಜೋಸ್ನಾ ಜಿಮ್ಮಿ ಎಂಬ ಮಹಿಳೆ ಪರ್ಸ್ ಕಳೆದುಕೊಂಡವರು, ಅವರು ಚಿಕಿತ್ಸೆಗೆ ಸಂಬಂಧಿಸಿ ಹಾಸನಕ್ಕೆ ಹೋದ ವೇಳೆ ಹಾಸನದ ಬಸ್ ನಿಲ್ದಾಣದಲ್ಲಿ ತನ್ನ ಪರ್ಸ ಅನ್ನು ಕಳೆದುಕೊಂಡಿದ್ದರು. ಹಾಸನದಿಂದ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದ ಆತೂರಿನ ತುಫೈಲ್ ಎಂಬವರಿಗೆ ಈ ಪರ್ಸ್ ಸಿಕ್ಕಿದ್ದು, ಅದರಲ್ಲಿ ಯಾವುದೇ ಫೋನ್ ನಂಬ್ರ ಇಲ್ಲದ ಕಾರಣ ಅದರ ವಾರೀಸುದಾರರನ್ನು ಪತ್ತೆ ಹಚ್ಚುವ ಸಲುವಾಗಿ ಅವರು ಉಪ್ಪಿನಂಗಡಿಯ ಸೌದಿ ಫ್ಯಾನ್ಸಿ ಮಾಲಕರಿಗೆ ತಂದೊಪ್ಪಿಸಿದ್ದರು. ಪರ್ಸ್ ನಲ್ಲಿದ್ದ ಸ್ಟುಡಿಯೋ ಒಂದರ ಕವರ್ ನಲ್ಲಿದ್ದ ಮೊಬೈಲ್ ಪೋನ್ ನಂಬ್ರದ ಮೂಲಕ ಸ್ಟುಡಿಯೋ ಮಾಲಕರನ್ನು ಸಂಪರ್ಕಿಸಿ ಮಹಿಳೆಯನ್ನು ಪತ್ತೆ ಹಚ್ಚಲು ನೆರವು ಕೇಳಲಾಯಿತು. ಸ್ಟುಡಿಯೋ ಮಾಲಕರ ಪ್ರಯತ್ನದ ಫಲವಾಗಿ ಜೋಸ್ನಾ ಜಿಮ್ಮಿಯವರನ್ನು ಸಂಪರ್ಕಿಸಲಾಗಿ ಪರ್ಸ್ ಸಿಕ್ಕಿರುವ ವಿಚಾರವನ್ನು ತಿಳಿಸಲಾಯಿತು. ಅದರಂತೆ ಆದಿತ್ಯವಾರದಂದು ಉಪ್ಪಿನಂಗಡಿಗೆ ಬಂದು ಸೌದಿ ಫ್ಯಾನ್ಸಿ ಮಾಲಕ ಹಾರೂನ್ ರಶೀದ್ ಅಗ್ನಾಡಿ ರವರಿಂದ ಪರ್ಸ್ ಸ್ವೀಕರಿಸಿ, ಧನ್ಯವಾದ ಸಲ್ಲಿಸಿದರು.


LEAVE A REPLY

Please enter your comment!
Please enter your name here