ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ರವರಿಗೆ ಬೀಳ್ಕೋಡುಗೆ- ಸನ್ಮಾನ

0

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 5 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿಸೇವೆ ಸಲ್ಲಿಸಿ, ಮಂಗಳೂರಿಗೆ ಉದ್ಯೋಗ ನಿಮಿತ್ತ ತೆರಳಲಿರುವ ಹರೀಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ದ.ಕ. ಸಹಕಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಅನುದೀಪ್, ವಿಸ್ತರಣಾಧಿಕಾರಿ ಮಾಲತಿ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಉಪಾಧ್ಯಕ್ಷೆ ಆಶಾ ರೈ ಕಲಾಯಿ, ನಿರ್ದೇಶಕರುಗಳಾದ ಪ್ರೇಮಚಂದ್ರ ಮೆದು, ಜಯರಾಮ ರೈ ಸೋಂಪಾಡಿ, ಪದ್ಮಯ್ಯ ಗೌಡ ಪರಣೆ, ಆಶಾಲತಾ ಬರೆಮೇಲು, ಗೀತಾ ಕುದ್ಮನಮಜಲು, ಬಾಬು ಮುಗೇರು, ಪ್ರಶಾಂತ್ ಕುಮಾರ್ ಗುಂಡ್ಯಡ್ಕ, ಗಂಗಾಧರ ಸುಣ್ಣಾಜೆ, ಸಂಘದ ಮಾಜಿ ಅಧ್ಯಕ್ಷರುಗಳಾದ ಸುದರ್ಶನ್ ನಾಯಕ್ ಕಂಪ, ಮಮತಾ ರೈ ದೇವಸ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here