ಪುಣ್ಚಪ್ಪಾಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮಾತ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ (ರಿ ) ಕಡಬ ತಾಲೂಕು ಸವಣೂರು ವಲಯದ ಶ್ರೀಮಾತ ಜ್ಞಾನ ವಿಕಾಸ ಕೇಂದ್ರವು ಪುಣ್ಚಪ್ಪಾಡಿ, ನೇರೋಳ್ತಡ್ಕ ಗೌರಿ ಸದನದ ಸಭಾಂಗಣದಲ್ಲಿ ಆ 24 ರಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ಕಡಬ ಸ್ಥಾಪಕಾಧ್ಯಕ್ಷ ಮಹೇಶ್‌ ಕೆ ಸವಣೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಜ್ಞಾನವಿಕಾಸ ಕೇಂದ್ರ ಸ್ಥಾಪನೆಯಾಗುವುದರ ಮೂಲಕ ಜ್ಞಾನವಿಕಾಸಕ್ಕೆ ಸೇರಿದ ಮಹಿಳೆಯರಲ್ಲಿ ಸ್ವಾವಲಂಬಿಯಾಗಿ ಬದುಕಲು ಪ್ರೇರಣೆಯಾಗುತ್ತದೆ ಮತ್ತು ಅವರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದರು.


ಪುಣ್ಚಪ್ಪಾಡಿ ಒಕ್ಕೂಟ ದ ಅಧ್ಯಕ್ಷ ರಾದ ವಿಜಯ ರವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮರ್ಥ ಜನಸೇವಾ ಟ್ರಸ್ಟ್‌ ನ ಅಧ್ಯಕ್ಷರಾದ ಗಿರಿಶಂಕರ ಸುಲಾಯರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರು ಮಾತ್ರವಲ್ಲದೇ ಅವರ ಕುಟುಂಬವು ಉತ್ತಮ ರೀತಿಯಲ್ಲಿ ಬದುಕನ್ನು ನಡೆಸಲು ಯೋಜನೆ ಕಲ್ಪಿಸಿಕೊಟ್ಟಿದೆ ಆ ನಿಟ್ಟಿನಲ್ಲಿ ಅದರ ಪ್ರಯೋಜನೆವನ್ನು ಮತ್ತಷ್ಟು ಪಡೆದುಕೊಳ್ಳಬೇಕು ಎಂದರು.

ತಾಲೂಕು ಯೋಜನಾಧಿಕಾರಿಯವರಾದ ಪ್ರಕಾಶ್‌ ಕುಮಾರ್‌ ರವರು ಮಾತಾಡುತ್ತ ಜ್ಞಾನ ವಿಕಾಸ ಕೇಂದ್ರದ ಕಲ್ಪನೆ ಗ್ರಾಮೀಣ ಮಹಿಳೆಯರಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ವೇದಿಕೆ ಯಾಗಿದೆ ಎಂದು ಯೋಜನೆ ಬಗ್ಗೆ ಮಾಹಿತಿ ನೀಡಿದರು. ಮಾಸ್ ಲಿಮಿಟೆಡ್‌ ಇದರ ನಿರ್ದೇಶಕರಾದ ಸುಧಾ ಎಸ್‌ ರೈಯವರು ಸ್ವಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಮಮತ ರೈ ದೇವಸ್ಯಯವರು ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡುತ್ತಾ ಸ್ವ ಉದ್ಯೋಗ ದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು ಪ್ರೇರಣೆ ನೀಡಿದರು. ವೇದಿಕೆಯಲ್ಲಿ ಸವಣೂರು ವಲಯ ಮೇಲ್ವಿಚಾರಕರಾದ ಹೇಮಲತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿಯಾದ ಅಮಿತಾ ಸ್ವಾಗತಿಸಿ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಕಾರ್ಯಕ್ರಮ ನಿರೂಪಿಸಿ, ಜ್ಞಾನ ವಿಕಾಸದ ಸಂಯೋಜಕಿ ಯಶೋಧ ನೂಜಾಜೆ ವಂದಿಸಿದರು.

LEAVE A REPLY

Please enter your comment!
Please enter your name here