






ಆದರ್ಶ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯ ಆರೋಗ್ಯ ವಿಚಾರಿಸಿ ಸಂಸದ ಕ್ಯಾ| ಬ್ರಿಜೇಶ್ ಚೌಟ


ಪುತ್ತೂರು: ದರ್ಬೆಯಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಅಂಜನಾ ಪೈ ಆರೋಗ್ಯವನ್ನು ವಿಚಾರಿಸಲು ಸಂಸದ ಬ್ರಿಜೇಶ್ ಚೌಟ ಅವರು ಆ.24 ರಂದು ಭೇಟಿ ನೀಡಿದರು.



ಗಾಯಾಳು ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಭಯವಿಲ್ಲದ ವಾತಾವರಣ ಪುತ್ತೂರಿನಲ್ಲಿದೆ. ಆಶ್ಚರ್ಯ, ಭಯ, ವಿಚಿತ್ರವಾಗಿ ಕಾಣುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಇಂತಹ ಘಟನೆ ನಡೀತಿದೆ. ಓರ್ವ ಮಹಿಳೆ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ರಾಜ್ಯದಲ್ಲಿ ಸರ್ಕಾರ ಇದೆಯಾ ಅಥವಾ ಸತ್ತಿದೆಯಾ ?. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ರೌಡಿಗಳು, ಕೆಲ ಮಾನಸಿಕತೆಯ ಜನರು ಏನು ಬೇಕಾದ್ರೂ ಮಾಡಿದ್ರೆ ನಡೀತದೆ ಅಂದುಕೊಂಡಿದ್ದಾರೆ. ಅವರು ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಂದುಕೊಂಡಿದ್ದಾರೆ. ಆದರೆ ಸರ್ಕಾರ ಬದಲಾಗುತ್ತವೆ, ಆದ್ರೆ ಕಾನೂನು ಒಂದೇ ಆಗಿರುತ್ತದೆ ಎಂಬುದು ತಿಳಿದಿರಲಿ. ಅವರು ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಅಡ್ಡಿಮಾಡಿದ್ದಾರೆ. ಪೊಲೀಸ್ ವಾಹನದಲ್ಲಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಪುತ್ತೂರಿನಲ್ಲಿ ಈ ರೀತಿಯ ಸಂಸ್ಕೃತಿಯನ್ನ ತೋರಿಸುವುದು ಸರಿಯಲ್ಲ. ಯಾರು ಹಲ್ಲೆ ಮಾಡಿದ್ದಾರೋ ಅವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದರು.










