ಸಂಟ್ಯಾರು ಸರಸ್ವತಿ ಸದನದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಪುತ್ತೂರು: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಗ್ರಾಮವಿಕಾಸ ಯೋಜನೆಯ ರಜತ ಮಹೋತ್ಸವದ ಪ್ರಯುಕ್ತ ಕುಂಬ್ರ ವಲಯದ ಪರ್ಪುಂಜ ಘಟ ಸಮಿತಿ ಮತ್ತು NVG Eye Mitra Mangalore DK ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಇದರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಸಂಟ್ಯಾರು ಸರಸ್ವತಿ ಸದನದಲ್ಲಿ ನಡೆಯಿತು.


ಪುತ್ತೂರು ಶ್ರೀಸರಸ್ವತಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರಾಜಗೋಪಾಲ್ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಒಡಿಯೂರು ಶ್ರೀಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಶುಭ ಹಾರೈಸಿದರು. 2.5 NVG Eye Mitra Mangalore DK ಇದರ ವೈದ್ಯರು ಕಣ್ಣಿನ ಆರೋಗ್ಯದ ಮಾಹಿತಿ ನೀಡಿದರು. ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆ ಪರ್ಪುಂಜ ಘಟ ಸಮಿತಿಯ ಅಧ್ಯಕ್ಷರಾದ ಕೆ.ಬಾಬು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಟ್ಯಾರು ಸರಸ್ವತಿ ಪೂರ್ವ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ನಾಯಕ್ ವಾಗ್ಲೆ, ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆಯ ತಾಲೂಕು ಮೇಲ್ವಿಚಾರಕಿ ಸವಿತ ರೈ, ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆಯ ಕುಂಬ್ರ ವಲಯದ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ ಉಪಸ್ಥಿತರಿದ್ದರು.


ಸುಮಾರು ೧೦೮ ಜನ ಫಲಾನುಭವಿಗಳು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಅಗತ್ಯ ಇದ್ದವರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ವಿಕಾಸ ವಾಹಿನಿ ಸ್ವಸಹಾಯ ಸಂಘದ ಸದಸ್ಯೆ ವಸಂತಿ ಪ್ರಾರ್ಥಿಸಿ ಸೇವಾದೀಕ್ಷಿತೆ ಸುಲೋಚನ ಸ್ವಾಗತಿಸಿದರು. ಕುಂಬ್ರ ವಲಯದ ಸಂಯೋಜಕಿ ಜಯಂತಿ ಜಿ. ಕಾರ್ಯಕ್ರಮ ನಿರೂಪಿಸಿದರು. ಕುಂಬ್ರ ವಲಯದ ಸೇವಾ ದೀಕ್ಷಿತೆಯರಾದ ಅಶ್ವಿನಿ, ಪ್ರತಿಭಾ ಕೆ, ಅಕ್ಷಯ ಕುಮಾರಿ, ಯಮುನಾ, ಘಟ ಸಮಿತಿಯ ಪದಾಧಿಕಾರಿಗಳಾದ ಅಂಬಿಕಾ ರಮೇಶ್, ಕುಶಲ ಸುವರ್ಣ, ಭಾಸ್ಕರ ಜನಾರ್ಧನ ನಾಯಕ್, ತಾರಾ, ಲೀಲಾವತಿ ವಿವಿಧ ಜವಾಬ್ದಾರಿ ನಿರ್ವಹಿಸಿದರು. ವಿಕಾಸ ವಾಹಿನಿ ಸ್ವ ಸಹಾಯ ಸಂಘದ ಸದಸ್ಯೆ ಜಯಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here