






ಪುತ್ತೂರು: ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಪುತ್ತೂರು ಇವರ ಸಂಸ್ಮರಣೆಯ ಸಲುವಾಗಿ ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಭಾಂಗಣದಲ್ಲಿ ಸೆ.5ರಂದು ಶಿಕ್ಷಕ ದಿನಾಚರಣೆಯ ಪ್ರಯುಕ್ತ ಅಪರಾಹ್ನ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.


ಈ ಸಂದರ್ಭದಲ್ಲಿ ಶಿಕ್ಷಣ, ಸಂಸ್ಕೃತಿ, ದೇಶಭಕ್ತಿ ಹಾಗೂ ಪರಿಸರದ ಬಗ್ಗೆ ಸ್ವರಚಿತ ಕವಿತೆಗಳನ್ನು ವಾಚನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಶಿಕ್ಷಕರು ತಮ್ಮ ಹೆಸರನ್ನು 9448348234, 8277591731 ಸಂಖ್ಯೆಗೆ ವಾಟ್ಸ್ ಆಪ್ ಮೂಲಕ ಆ.31ರ ಒಳಗೆ ತಿಳಿಸಿ ಹೆಸರು ನೋಂದಾಯಿಸುವಂತೆ ಕಾರ್ಯಕ್ರಮ ಸಂಚಾಲಕ ಸಾಹಿತಿ ಜಯಾನಂದ ಪೆರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













