ನಿಡ್ಪಳ್ಳಿ . ಶಾಂತದುರ್ಗಾ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ನಿಡ್ಪಳ್ಳಿ: ಶ್ರೀ ಶಾಂತಾದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ನಿಡ್ಪಳ್ಳಿ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.19 ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಮೇಲ್ವಿಚಾರಕರಾದ ನಮಿತಾ ಮಾತನಾಡಿ ಎನ್.ಆರ್.ಎಲ್.ಎಂ ಯೋಜನೆಯಡಿ ಮಹಿಳೆಯರ ಸ್ವಾವಲಂಬಿ ಜೀವನ, ಘನತ್ಯಾಜ್ಯ ಘಟಕ ನಿರ್ವಹಣೆ, ಮಹಿಳೆಯರಿಗೆ‌ ಉದ್ಯೋಗ, ತರಬೇತಿ, ಅನುದಾನದ ಬಳಕೆಯ ಬಗ್ಗೆ ತಿಳಿಸಿದರು.

ಪಂಚಾಯತ್ ಆಡಳಿತಾಧಿಕಾರಿ ಚೇತನ್ ಕುಮಾರ್ ಎಚ್.ಎನ್ ಮಾತನಾಡಿ ಗ್ರಾಮ ಪಂಚಾಯಿತಿನಲ್ಲಿ ಸಿಗುವ ಸೌಲಭ್ಯಗಳು ಕುರಿತು ಮಾತನಾಡಿ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಬದ್ಧವಾಗಿ ನಿಮಗೆ ಗ್ರಾಮ ಪಂಚಾಯತ್ ವತಿಯಿಂದ ಸೌಲಭ್ಯ ನೀಡುವುದಾಗಿ ತಿಳಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮಾತನಾಡಿ ಪಂಚಾಯತ್ ವತಿಯಿಂದ ಸಿಗುವ ಸೌಲಭ್ಯದ ಕುರಿತು ಹಾಗೂ ಐ.ಎಫ್.ಸಿ ಘಟಕ ನಿರ್ಮಾಣ ಹಾಗೂ ಘನತ್ಯಾಜ್ಯ ಘಟಕಕ್ಕೆ ಕಸ ಸಂಗ್ರಹಣೆ ಮತ್ತು ಶುಲ್ಕ ಸಂಗ್ರಹಕ್ಕೆ ಸಹಕರಿಸುವಂತೆ ತಿಳಿಸಿದರು.



ಜಿಲ್ಲಾ ಕಾರ್ಯಕ್ರಮ ಸಂಯೋಜಕಿ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಶ್ವಿನಿ ಮಹಿಳೆಯರ ದೌರ್ಜನ್ಯ ಎಂದರೇನು? ದೌರ್ಜನ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವ ಕುರಿತು ಮಾಹಿತಿಯನ್ನು ನೀಡಿದರು.

  • ನೂತನ ಪದಾಧಿಕಾರಿಗಳ ಆಯ್ಕೆ:

  • ಮುಂದಿನ 2 ವರ್ಷಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗಾಯತ್ರಿ, ಕಾರ್ಯದರ್ಶಿಯಾಗಿ ಪವಿತ್ರರವರನ್ನು ಆಯ್ಕೆ ಮಾಡಲಾಯಿತು. ಸಭಾಧ್ಯಕ್ಷರಾದ ಲಲಿತಾ ಮಾತನಾಡಿ ಮಹಿಳೆಯರು ಎಲ್ಲರೂ ಮುಂದೆ ಬಂದು ಸ್ವಾವಲಂಬಿಯಾಗಿ ಬದುಕಲು ತುಂಬಾ ಅವಕಾಶಗಳು ಸಿಗುತ್ತವೆ ಎಂದು ಚುಟುಕಾಗಿ ಹೇಳಿ ಸಭೆಗೆ ಶುಭ ಹಾರೈಸಿದರು.

    ಭವ್ಯ, ಚಿತ್ರಕಲಾ, ತೇಜಸ್ವಿನಿ ಪ್ರಾರ್ಥಿಸಿದರು. ಒಕ್ಕೂಟದ ಕಾರ್ಯದರ್ಶಿ ಸೌಮ್ಯ ಜೆ. ರೈ ವರದಿ ಮಂಡಿಸಿದರು. ಪಶು ಸಖಿ ತೇಜಸ್ವಿನಿ ವಂದಿಸಿದರು.ಕು.ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಗುಂಪಿನ ಸದಸ್ಯರು, ಒಕ್ಕೂಟದ ಎಲ್ಲಾ ಸಿಬ್ಬಂದಿ ವರ್ಗದವರು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗು ಘನ ತ್ಯಾಜ್ಯ ಘಟಕದ ಸಿಬ್ಬಂದಿ ವರ್ಗದವರು ಸಹಕರಿಸಿದರು

LEAVE A REPLY

Please enter your comment!
Please enter your name here