ಉಪ್ಪಳಿಗೆ ಒಕ್ಕೂಟದ ವತಿಯಿಂದ ಪರಿಸರ ಮಾಹಿತಿ- ಸಸಿ ನಾಟಿ ಕಾರ್ಯಕ್ರಮ.

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಉಪ್ಪಳಿಗೆ ಒಕ್ಕೂಟದ ವತಿಯಿಂದ ಪರಸರ ಮಾಹಿತಿ ಹಾಗೂ ಸಸಿ ನಾಟಿ ಕಾರ್ಯಕ್ರಮ ಆ.24 ರಂದು ನಡೆಯಿತು.

ಉಪ್ಪಳಿಗೆ ಕಾರ್ಯಕ್ಷೇತ್ರದ ಅಜಲಡ್ಕ ಕೆರೆಯ ಆವರಣದ ಸುತ್ತಮುತ್ತ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಹರೀಶ್ ರವರು ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರುಗಳಾದ ನಾರಾಯಣ ನಾಯ್ಕ, ಚನಿಯಪ್ಪ  ನಾಯ್ಕ, ಸೀತಾರಾಮ ರೈ ಮತ್ತು ಸದಸ್ಯರು ಹಾಗೂ ವಲಯ ಮೇಲ್ವಿಚಾರಕ ಆದರ್ಶ್,ಸೇವಾ ಪ್ರತಿನಿಧಿ  ಶಾಲಿನಿ.ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here