ಪಾಣಾಜೆಯಲ್ಲಿ ಯಶಸ್ವಿಯಾಗಿ ನಡೆದ “ಹಿಂದವಿ” ಕೆಸರ್ದ ಲೇಸ್ ಕಾರ್ಯಕ್ರಮ

0

ನಿಡ್ಪಳ್ಳಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್  ಪಾಣಾಜೆ ಗ್ರಾಮ ಸಮಿತಿಯ ವತಿಯಿಂದ ಆ.23ರಂದು ಪಾಣಾಜೆ ಗ್ರಾಮದ ಬೊಳ್ಳಿಂಬಳ ಶ್ರೀದೇವಿ ವನ ಗದ್ದೆಯಲ್ಲಿ “ಹಿಂದವಿ” ಕೆಸರ್ದ ಲೇಸ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಗೋಪಾಲ ಕೃಷ್ಣ ಓಕುಣ್ಣಾಯ ಅವರು ಬೆಳಿಗ್ಗೆ ದೀಪ ಪ್ರಜ್ವಲನೆ  ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶಾಂತಪ್ಪ ರೈ ಬೊಳ್ಳಿಂಬಳ, ಸೋಮಪ್ಪ ನಾಯ್ಕ ಬಾಜುಗುಳಿ, ನರಸಿಂಗ ಪೂಜಾರಿ, ವೆಂಕಪ್ಪ ನಾಯ್ಕ ಭರಣ್ಯ, ಶೀನಪ್ಪ ರೈ ಕೊಂದಲಡ್ಕ, ಶೀನ ಪೂಜಾರಿ ಬೊಳ್ಳಿಂಬಳ, ನವೀನ್ ರೈ ಬೊಳ್ಳಿಂಬಳ, ಸಂಜಿವಿ ರೈ ಕಡಮಾಜೆ ಹಾಗೂ ಬಟ್ಯ ಮಾಸ್ಟರ್ ಉಪಸ್ಥಿತರಿದ್ದರು.

ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ನಾರಾಯಣ ಪ್ರಕಾಶ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಊರ ಹಾಗೂ ಪರವೂರಿನ ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದರು.

ಸಂಜೆ  ನಡೆದ ಸಮಾರೋಪ ಸಮಾರಂಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪುತ್ತೂರು ಇದರ ಸಂಚಾಲಕರಾದ  ಅರುಣ್ ಕುಮಾರ್ ಪುತ್ತಿಲ ಅವರನ್ನು ಪಾಣಾಜೆ ಗ್ರಾಮ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಅದೇ ರೀತಿ ಖ್ಯಾತ ವೈದ್ಯ ದಂಪತಿಗಳಾದ ಡಾ. ಶ್ರೀನಿವಾಸ ನಾರಾಯಣ (ತೇಜಸ್ವಿ ಆಸ್ಪತ್ರೆ, ಮಂಗಳೂರು) ಹಾಗೂ ಡಾ| ಚೈತ್ರಾ ರಮೇಶ್ ಅವರನ್ನು ಗ್ರಾಮ ಸಮಿತಿಯ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಪಾಣಾಜೆ ಗ್ರಾಮದ ಪ್ರತಿಯೊಂದು ಹಿಂದೂ ಮನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದು, ಸಮಾಜದ ವಿವಿಧ ಕ್ಷೇತ್ರಗಳಿಗೆ ನಾಯಕರನ್ನು ನೀಡಿದ ಹೆಮ್ಮೆಯ ಮಣ್ಣು ಪಾಣಾಜೆ ಗ್ರಾಮವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಂಘಟಕರು ಹಾಗೂ ಗ್ರಾಮಸ್ಥರನ್ನು ಅವರು ಅಭಿನಂದಿಸಿದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರಿನ ಪ್ರಮುಖರಾದ ಶ್ರೀರಾಮ್ ಭಟ್ ಪಾತಾಳ, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ರೂಪೇಶ್, ರವಿಕುಮಾರ್ ರೈ ಮಠ, ಗಣೇಶ್‌ಚಂದ್ರ ಮಕರಂದ, ಶ್ಯಾಮ್ ಪ್ರಕಾಶ್, ಮನೀಶ್ ಕುಲಾಲ್ ಹಾಗೂ ಟ್ರಸ್ಟ್‌ನ ಹಿತೈಷಿಗಳಾದ ಅರುಣ್ ಗಟ್ಟಿ ಅಗರಿಮಾರ್, ಜಯರಾಮ ರೈ ಅಡ್ಯತ್ತಿಮಾರ್, ಸುದರ್ಶನ್ ರೈ ನೀರ್ಪಾಡಿ, ಶಿವಪ್ರಸಾದ್ ನುಳಿಯಾಲು, ಜಯರಾಮ ರೈ ಚೆಂಬರಕಟ್ಟ, ಭರತ್ ಆಳ್ವ, ಸಂತೋಷ್ ರೈ, ಗಿರೀಶ್ ಆನಡ್ಕ, ಮಂಜುನಾಥ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here