







ಪುತ್ತೂರು : ನೆಹರುನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮುಂಭಾಗದ ಶ್ರೀದೇವಿ ಸಂಕೀರ್ಣದಲ್ಲಿ ಅ.26 ರಂದು ನೂತನ ಮೆನ್ಸ್ ಬ್ಯೂಟಿ ಪಾರ್ಲರ್ ಶುಭಾರಂಭಗೊಂಡಿತು.
ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ ನಾರಾಯಣ ಅವರು ನೂತನ ಸಂಸ್ಥೆಯ ಉದ್ಘಾಟನೆ ನೆರವೇರಿಸಿ , ಹಾರೈಸಿದರು. ತೀಯಾ ಸಮಾಜ ಸೇವಾ ಸಮಿತಿ ಇದರ ಖಜಾಂಚಿ ಬಿ.ಎಂ ಶ್ರೀಧರ್ ದೀಪ ಪ್ರಜ್ವಲನೆ ನೆರವೇರಿಸಿದರು.
ತೀಯಾ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಪುರುಷೋತ್ತಮರವರು ಮಾತನಾಡಿ , ಯುವ ಜನತೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು , ಅತ್ಯಾಧುನಿಕ ಸೌಲಭ್ಯಗಳು, ಸ್ವಚ್ಛ ಹಾಗೂ ಆರಾಮದಾಯಕ ವಾತಾವರಣ ಮತ್ತು ವೃತ್ತಿಪರ ಸೇವೆಗಳನ್ನು ಒದಗಿಸುವ ಉದ್ದೇಶವನ್ನಿಟ್ಟುಕೊಂಡು ಮಾಲೀಕ ಗೋಪಾಲಕೃಷ್ಣರವರು ಆರಂಭಿಸಿರುವ ನೂತನ ಬ್ಯೂಟಿ ಸೆಲೂನಿಗೆ ಸ್ಥಳೀಯ ಜನತೆ ಮತ್ತು ಕಾಲೇಜು ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ ಸಿಗಲಿ ಹಾಗೂ ಅತ್ಯುತ್ತಮ ಸೇವೆ ನೀಡುವ ಮೂಲಕ ಇನ್ನಷ್ಟೂ ಸಹ ಸಂಸ್ಥೆ ಹುಟ್ಟಲಿಯೆಂದು ಹಾರೈಸಿದರು.
ಮಾಲೀಕ ಗೋಪಾಲಕೃಷ್ಣ ಮಾತನಾಡಿ ,ಕೂದಲು ಕಟಿಂಗ್, ಹೇರ್ ಸ್ಟೈಲಿಂಗ್, ಶೇವಿಂಗ್, ಫೇಶಿಯಲ್ ಸೇರಿದಂತೆ ಪುರುಷರಿಗೆ ಅಗತ್ಯವಿರುವ ವಿವಿಧ ಗ್ರೂಮಿಂಗ್ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು , ಯುವಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪಾರ್ಲರ್‌ನ ತೆರೆಯಲಾಗಿದ್ದು , ಎಲ್ಲರೂ ಸಹಕಾರ ನೀಡುವಂತೆ ಕೇಳಿ ,ವಂದಿಸಿದರು.
ಕ.ರಾ.ಸಾ.ನಿಗಮದ ನಿವೃತ್ತ ಉದ್ಯೋಗಿ ಹರೀಶ್ ಗೌಡ ,ಆನಂದ ಗೌಡ ಮೂವಪ್ಪು ಸಹಿತ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶ್ರೀದೇವಿ ಸಂಕೀರ್ಣದಲ್ಲಿರುವ ವಿವಿಧ ಮಳಿಗೆಯ ಮಾಲೀಕರು ಮತ್ತು ಸಿಬಂದಿಗಳು ಹಾಜರಿದ್ದರು.



ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸದಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ವೀಣಾ ಭಾಸ್ಕರ್ ಮತ್ತು ಅವರ ಸಹೋದರಿ ಡೀನಾ ಕುಮಾರಿ ಹಾಗೂ ಪಾರ್ಲರ್ ಸಿಬಂದಿಗಳಾದ ಶಾರೂಕ್ ಮತ್ತು ಉಧೇಶ್ ಸಹಕಾರ ನೀಡಿದರು.













